ಕೇಂದ್ರ ಸರ್ಕಾರ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ ವಾಹನಗಳ ಹೊಗೆಯಿಂದ ದೆಹಲಿಯ ವಾಯು ಮಾಲಿನ್ಯ ಮಿತಿ ಮೀರಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಮೇಲೆ ರೂ. 1.5 ಲಕ್ಷದವರೆಗೆ ಸಬ್ಸಿಡಿ ಒದಗಿಸಲಾಗುವುದು ಎಂದು ಘೋಷಿಸಿತ್ತು. ಇದೀಗ ಮತ್ತೊಂದು ಹೊಸ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
2/ 11
ದೇಶದಲ್ಲಿ ತೈಲ ಬೆಲೆಗಳ ಏರಿಕೆ ಹಾಗೂ ವಾಯು ಮಾಲಿನ್ಯ ನಿಯಂತ್ರಿಸಲು ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಲ್ಲಿ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಲು ಸರ್ಕಾರ ಹೊಸ ಮಾರ್ಗವನ್ನು ಕಂಡುಕೊಂಡಿದೆ.
3/ 11
ಒಮ್ಮೆ ಬಳಸಿದ ಅಡುಗೆ ಆಯಿಲ್ನ್ನು ಬಳಸಿ ಜೈವಿಕ ಡೀಸೆಲ್ ತಯಾರಿಸುವಲ್ಲಿ ಯಶಸ್ವಿಯಾಗಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಿದೆ.
4/ 11
ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸಿದರೆ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಆಯಿಲ್ನ್ನು ಮರುಬಳಕೆ ಮಾಡಿ ದೇಶದಲ್ಲಿನ ತೈಲದ ಬೇಡಿಕೆಯನ್ನು ಹತೋಟಿಗೆ ತರಲು ಈಗ ಪೆಟ್ರೋಲಿಯಂ ಕಂಪೆನಿಗಳು ಹೊಸ ಹೆಜ್ಜೆಯನ್ನಿಟ್ಟಿದೆ.
5/ 11
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಎಚ್ಪಿಸಿಎಲ್, ಬಿಪಿಸಿಎಲ್, ಐಒಸಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಜೈವಿಕ ಡೀಸೆಲ್ ತಯಾರಿಸಲು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.
6/ 11
ಜೈವಿಕ ಡೀಸೆಲ್ ತಯಾರಿಸಲು ಪ್ಲಾಂಟ್ಗಳನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲೇ ಬಳಸಿದ ಅಡುಗೆ ಅನಿಲ ಖರೀದಿ ಆರಂಭವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಇದು ಯಶಸ್ವಿಯಾದರೆ...
7/ 11
ಆರಂಭದಲ್ಲಿ ಪ್ರತಿ ಲೀಟರ್ಗೆ 51 ರೂ. ಮತ್ತು ಎರಡನೇ ವರ್ಷದಲ್ಲಿ ಲೀಟರ್ಗೆ 52.7 ರೂ.ಗೆ ಮತ್ತು ಮೂರನೇ ವರ್ಷ ಲೀಟರ್ಗೆ 54.5 ರೂ.ಗೆ ಜೈವಿಕ ಡೀಸೆಲ್ ಅನ್ನು ಕಂಪೆನಿಗಳು ಮಾರಾಟ ಮಾಡಲಿದೆ.
8/ 11
ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಬಳಸಿದ ಅಡುಗೆ ಎಣ್ಣೆ ಶೇಖರಣೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ. ಅದರಂತೆ ನಿಮ್ಮ ಬಳಿ ಬಳಸಿದ ಎಣ್ಣೆಯಿದ್ದರೆ 1800112100 ನಂಬರ್ಗೆ ಕರೆ ಮಾಡಿ ಎಂದು ತಿಳಿಸಿದೆ. ಏನಿದು ಯೋಜನೆ?
9/ 11
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಇಂತಹದೊಂದು ಯೋಜನೆ ಚಾಲನೆ ನೀಡಿದ್ದಾರೆ. ಬಳಸಿದ ಅಡುಗೆ ಎಣ್ಣೆಯನ್ನು ಠೇವಣಿ ಮಾಡಲು ಈಗ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.
10/ 11
ಈಗಾಗಲೇ ಬಯೋ-ಡಿ ಎಂಬ ಕಂಪೆನಿ ಬಳಸಿದ ಅಡುಗೆ ಎಣ್ಣೆಯಿಂದ ಜೈವಿಕ ಡೀಸೆಲ್ ತಯಾರಿಸಿದ್ದು, ದೆಹಲಿ ಮತ್ತು ಎನ್ಸಿಆರ್ ವಲಯದಲ್ಲಿ ಕಂಪನಿಯು ಬಳಸಿದ ಅಡುಗೆ ತೈಲವನ್ನು ಪ್ರತಿ ಲೀಟರ್ಗೆ 22 ರಿಂದ 24 ರೂ.ನಂತೆ ಖರೀದಿಸಲಿದೆ. ಅದಾಗ್ಯೂ, ಕಾನ್ಪುರ ಮತ್ತು ಲಕ್ನೋದಲ್ಲಿ 15 ರೂಪಾಯಿಗೆ ಖರೀದಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
11/ 11
ಈ ಯೋಜನೆಯು ಜಾರಿಗೆ ಬಂದರೆ ದೇಶದ ತೈಲ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದು ಕೇಂದ್ರ ತೈಲ ಸಚಿವಾಲಯವು ಅಭಿಪ್ರಾಯಪಟ್ಟಿದೆ.