ಮೊದಲಿಗೆ ಗ್ಯಾಸ್ ಸ್ಟೇಷನ್ ಕ್ಲರ್ಕ್ ನನಗೆ ಟಿಕೆಟ್ ಖಾಲಿಯಾಗಿದೆ ಎಂದಿದ್ದರು. ಆದರೆ ನಾನು ಅವನನ್ನು ಮತ್ತೊಮ್ಮೆ ಪರಿಶೀಲಿಸಲು ಹೇಳಿದೆ. ಏಕೆಂದರೆ ನಾನು ಈ ಕ್ರಾಸ್‌ವರ್ಡ್ ಆಟವನ್ನು ಬಹಳ ಇಷ್ಟಪಡುತ್ತೇನೆ. ಕೊನೆಗೆ ಆತ ಹುಡಕಾಡಿ ಉಳಿದುಕೊಂಡಿದ್ದ ಮೊನೆ ಟಿಕೆಟ್ಅನ್ನ ನನಗೆ ಕೊಟ್ಟಿದ್ದ ಎಂದು ಗಿಮ್ಲೆಟ್ ಹೇಳಿದ್ದಾರೆ. ಜಾಕ್ಪಾಟ್ ಟಿಕೆಟ್ ಮಾರಾಟ ಮಾಡಿದ್ದಕ್ಕಾಗಿ ಕ್ಲರ್ಕ್ಗೂ ಕೂಡ 2000 ಡಾಲರ್(1.6 ಲಕ್ಷ ರೂ) ಕಮಿಷನ್ ಸಿಕ್ಕಿದೆ.
ಇನ್ನು ತಮ್ಮ ತಾಯಿಗೆ ಲಾಟರಿಯಲ್ಲಿ 2 ಮಿಲಿಯನ್ ಡಾಲರ್ ಗೆದ್ದಿದ್ದಕ್ಕೆ ಆಕೆಯ ಕ್ಯಾನ್ಸರ್ ಪೀಡಿತ ಮಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಏಕೆಂದರೆ ತನ್ನ ತಾಯಿ ಜೀವನ ಪರ್ಯಂತ ಉಳಿಸಿದ್ದ ಹಣವನ್ನು ತನ್ನ ಚಿಕಿತ್ಸೆಗೆ ಬಳಸಿದ್ದಳು. ಈಗ ದೊಡ್ಡ ಮೊತ್ತದ ಲಾಟರಿ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ. ಇನ್ನು 2 ಮಿಲಿಯರ್ ಡಾಲರ್ನಲ್ಲಿ ತೆರಿಕೆ ಕಡಿತವಾಗಿ ಜೆರಾಲ್ಡೈನ್ ಗಿಮ್ಲೆಟ್ಗೆ 16,45,000 ಡಾಲರ್ (13.5 ಕೋಟಿ ರೂಪಾಯಿ) ಪಡೆದುಕೊಂಡಿದ್ದಾರೆ.