Joe Biden: ಪಾಕಿಸ್ತಾನ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದಿದ್ದ ಅಮೆರಿಕದಿಂದ ಯೂ ಟರ್ನ್!
ಪಾಕಿಸ್ತಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ವಿವರಿಸಿ ನೀಡಿದ್ದ ತನ್ನ ಹೇಳಿಕೆಯಿಂದ ಅಮೆರಿಕ ಹಿಂದೆ ಸರಿದಿದೆ. ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.
ಪಾಕಿಸ್ತಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ವಿವರಿಸುವ ತನ್ನ ಹೇಳಿಕೆಯಿಂದ ಅಮೆರಿಕ ಹಿಂದೆ ಸರಿದಿದೆದೆ. ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.
2/ 8
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ ಪಟೇಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಅಮೆರಿಕಾಗೆ ವಿಶ್ವಾಸವಿದೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.
3/ 8
ಅಮೆರಿಕ ಯಾವಾಗಲೂ ಸುಭದ್ರ ಪಾಕಿಸ್ತಾನವನ್ನು ಅಮೆರಿಕದ ಹಿತಾಸಕ್ತಿಗಳಿಗೆ ಪ್ರಮುಖವೆಂದು ಪರಿಗಣಿಸಿದೆ ಎಂದೂ ಅಮೆರಿಕ ತಿಳಿಸಿದೆ.
4/ 8
ಆದರೆ ಈ ಮೊದಲು ಯುಎಸ್ ಅಧ್ಯಕ್ಷ ಜೋ ಬೈಡೆನ್, ಬದಲಾಗುತ್ತಿರುವ ಅಂತರರಾಷ್ಟ್ರೀಯ ಭೌಗೋಳಿಕ ರಾಜಕೀಯ ಸನ್ನಿವೇಶದ ಕುರಿತು ಮಾತನಾಡುತ್ತಾ, ಕ್ಯಾಲಿಫೋರ್ನಿಯಾದಲ್ಲಿ ಭಾಷಣ ಮಾಡುವಾಗ ಪಾಕಿಸ್ತಾನವು 'ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ'ಗಳಲ್ಲಿ ಒಂದಾಗಬಹುದು ಎಂದು ಹೇಳಿದ್ದರು.
5/ 8
ಇದಾದ ಬಳಿಕ ಪಾಕಿಸ್ತಾನ ಶನಿವಾರ ಅಮೆರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್ಗೆ ಕರೆ ಮಾಡಿ ವಿಷಯ ವಿವರಿಸಿದೆ. ಎಫ್ -16 ಫ್ಲೀಟ್ಗಾಗಿ ಪಾಕಿಸ್ತಾನಕ್ಕೆ $450 ಮಿಲಿಯನ್ ರಿಪೇರಿ ಪ್ಯಾಕೇಜ್ ನೀಡುವ ಯುಎಸ್ ನಿರ್ಧಾರದ ನಂತರ ಬೈಡೆನ್ ಇಂತಹ ಟೀಕೆ ಮಾಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
6/ 8
ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು, ಇದು ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
7/ 8
ಈ ಒಪ್ಪಂದದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಶ್ನೆಗಳನ್ನು ಎತ್ತಿದ್ದರು. ಇಸ್ಲಾಮಾಬಾದ್ನೊಂದಿಗಿನ ವಾಷಿಂಗ್ಟನ್ನ ಸಂಬಂಧವು ಅಮೆರಿಕದ ಹಿತಾಸಕ್ತಿಗಳನ್ನು ಪೂರೈಸಲಿಲ್ಲ ಎಂದು ಅವರು ಹೇಳಿದ್ದರು.
8/ 8
ಪಾಕಿಸ್ತಾನದ F-16 ಫ್ಲೀಟ್ಗೆ ದುರಸ್ತಿ ಪ್ಯಾಕೇಜ್ ಒಪ್ಪಂದವನ್ನು ನೀಡಲು ವಾಷಿಂಗ್ಟನ್ನ ಕ್ರಮಕ್ಕೆ ಭಾರತದ ಆಕ್ಷೇಪಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಭಾರತವು ತಕ್ಷಣವೇ US ಸರ್ಕಾರಕ್ಕೆ ತಿಳಿಸಿತ್ತು.