ಈ ಹಿಂದೆಯೂ ಪ್ರಧಾನಿ ಮೋದಿ ಅವರನ್ನು ಹುಡುಕಿಕೊಂಡು ಬಂದ ಘಟನೆ ನಡೆದಿತ್ತು. ವಿಶ್ವದ ಪ್ರಭಾವಿ ನಾಯಕರಾದ ಮೋದಿ ಅವರನ್ನು ಅಮೆರಿಕವೇ ಹುಡುಕಿಕೊಂಡು ಬಂದಿದೆ ಎಂದು ಬಣ್ಣಿಸಲಾಗಿತ್ತು. ಇದೀಗ ಜಪಾನ್ನಲ್ಲಿ ಅದು ಮರುಕಳಿಸಿದೆ. ಇದೇ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಪ್ರಧಾನಿ ಮೋದಿಯನ್ನು ಆಲಿಂಗನ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ನಡುವೆ ಕೆಲಕಾಲ ಮಾತುಕತೆಯೂ ನಡೆದಿದೆ.
ಇದಕ್ಕೂ ಮೊದಲು ಹಿರೋಶಿಮಾದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆ ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ " ಗಾಂಧಿ ಪ್ರತಿಮೆ ಅನಾವರಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ" ಎಂದರು. ಇದೇ ವೇಳೆ ಜಪಾನ್ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಬೋಧಿ ವೃಕ್ಷವನ್ನು ಹಿರೋಷಿಮಾದಲ್ಲಿ ನೆಡಲಾಗಿದೆ ಎಂದು ತಿಳಿದು ಸಂತೋಷವಾಯಿತು. ಮಹಾತ್ಮ ಗಾಂಧಿ ಅವರ ಪ್ರತಿಮೆಯು ಅಹಿಂಸೆಯ ಸಿದ್ಧಾಂತವನ್ನು ಜಾಗತಿಕವಾಗಿ ಮತ್ತಷ್ಟು ಪಸರಿಸಲು ನೆರವಾಗುತ್ತದೆ ಎಂದರು.