Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

ಅಮೆರಿಕಾದ ಉನ್ನತ ಅಧಿಕಾರಿಯೊಬ್ಬರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಎಸ್ ಜೈಶಂಕರ್ ಅವರೊಂದಿಗೆ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಡ್ರಮ್ ಬೀಟ್‌ಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದ್ದಾರೆ.

First published:

 • 17

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ದೇಶದ ಜನತೆ ಹೋಳಿ ಹಬ್ಬದ (Holi Festival) ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್ (Rajnath Singh) ಅವರ ಮನೆಯಲ್ಲೂ ಬಣ್ಣದ ಹಬ್ಬವನ್ನು ಜೋರಾಗಿಯೇ ಆಚರಿಸಲಾಗಿದೆ. ವಿಶೇಷವೆಂದರೆ ಈ ವಿಶೇಷ ಸಂದರ್ಭದಲ್ಲಿ ವಿದೇಶಿ ಗಣ್ಯರು ಕೂಡ ಭಾಗಿಯಾಗಿದ್ದಾರೆ.

  MORE
  GALLERIES

 • 27

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ಅಮೆರಿಕಾದ ಉನ್ನತ ಅಧಿಕಾರಿಯೊಬ್ಬರು ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಎಸ್ ಜೈಶಂಕರ್ ಅವರೊಂದಿಗೆ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಡ್ರಮ್ ಬೀಟ್‌ಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದ್ದಾರೆ.

  MORE
  GALLERIES

 • 37

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಡ್ರಮ್ ಕೇಂದ್ರ ಸಚಿವ ರಾಜನಾಥ್​ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ಆಗಮಿಸಿ ಹೋಳಿ ಆಚರಣೆಯಲ್ಲಿ ಭಾಗಿಯಾಗಿದ್ದಲ್ಲದೆ, ಸಚಿವರ ಜೊತೆಗೆ ನೃತ್ಯ ಮಾಡಿದ್ದು ಇಂಟರ್​ ನೆಟ್​ನಲ್ಲಿ ಗಮನ ಸೆಳೆಯುತ್ತಿದೆ.

  MORE
  GALLERIES

 • 47

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ಮಾರ್ಚ್​ 7ರಿಂದ 10ರವರೆಗೆ ನಡೆಯಲಿರುವ ಇಂಡೋ-ಯುಎಸ್ ವಾಣಿಜ್ಯ ಸಂವಾದದ ಫೋರಮ್‍ನಲ್ಲಿ ಭಾಗವಹಿಸಲು ರೈಮೊಂಡೋ ಅವರು ಭಾರತ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ, ಅವರು ಭಾರತ ಮತ್ತು ಯುಎಸ್ ನಡುವೆ ಹೊಸ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಕುರಿತಂತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

  MORE
  GALLERIES

 • 57

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ಹೋಳಿ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಗೌರವ ಅನ್ನಿಸುತ್ತಿದೆ. ನನಗೆ ಇಂತಹ ಆತಿಥ್ಯ ನೀಡಿದ್ದಕ್ಕಾಗಿ ಸಚಿವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದೇ ಮೊದಲ ಬಾರಿಗೆ ಹೋಳಿ ಭಾಗವಾಗಿದ್ದೇನೆ. ಅದರ ಭಾಗವಾಗಿದ್ದಕ್ಕೆ ತುಂಬಾ ಖುಷಿಯಿದೆ ಎಂದು ರೈಮೊಂಡೋ ತಿಳಿಸಿದ್ದಾರೆ.

  MORE
  GALLERIES

 • 67

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ರಾಜನಾಥ್​ ಸಿಂಗ್ ಹೋಳಿ ಹಬ್ಬದ ಸಂಭ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅಮೇರಿಕಾದ ವಾಣಿಜ್ಯ ಕಾರ್ಯದರ್ಶಿ ಡ್ಯಾನ್ಸ್ ಮಾಡುತ್ತಾ ಡ್ರಮ್ ಬಾರಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

  MORE
  GALLERIES

 • 77

  Holi: ರಾಜನಾಥ್‌ ಸಿಂಗ್ ನಿವಾಸದಲ್ಲಿ ಹೋಳಿ ಸಂಭ್ರಮ ; ಕೇಂದ್ರ ಸಚಿವರೊಂದಿಗೆ ಕುಣಿದು ಕುಪ್ಪಳಿಸಿದ ಯುಎಸ್​ ಅಧಿಕಾರಿಗಳು!

  ಈ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಕೇಂದ್ರ ಕ್ರೀಡಾ, ಯುವ ವ್ಯವಹಾರಗಳು ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೋಳಿ ಆಡಿ ಸಂಭ್ರಮಿಸಿದರು.

  MORE
  GALLERIES