Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

ಇತ್ತೀಚೆಗೆ ವಿಮಾನದಲ್ಲಿ ನೀತಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ವಾರದ ಹಿಂದಷ್ಟೇ ಕೊಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್‌ ಸೇದಿ ಆತಂಕ ಸೃಷ್ಟಿಸಿದ ಘಟನೆ ನಡೆದಿತ್ತು. ಅದಕ್ಕೂ ಮುನ್ನ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಯೊಬ್ಬ ಪ್ಯಾಸೆಂಜರ್ ಮೇಲೆ ವಿಮಾನದಲ್ಲೇ ಮೂತ್ರ ವಿಸರ್ಜಿಸಿದ ಕೃತ್ಯವೂ ನಡೆದಿತ್ತು. ಈ ಪ್ರಕರಣಗಳಿಗೂ ಮುನ್ನ ಲಾಸ್ ಏಂಜಲೀಸ್‌ನಲ್ಲಿ ಯುವಕನೊಬ್ಬ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದು, ಇತ್ತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಬಾಗಿಲು ತೆಗೆಯಲು ಯತ್ನಿಸಿದ್ದು ಹಳೆಯದಾಯಿತು. ಈಗ ಮತ್ತೊಂದು ಪ್ರಕರಣ ನಡೆದಿದೆ.

First published:

  • 17

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಹೌದು.. 37 ವರ್ಷದ ವ್ಯಕ್ತಿಯೊಬ್ಬ ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

    MORE
    GALLERIES

  • 27

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವ ವ್ಯಕ್ತಿಯನ್ನು ರತ್ನಾಕರ್ ಕರುಂಕಂತ್ ದ್ವಿವೇದಿ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಹಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    MORE
    GALLERIES

  • 37

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಲಂಡನ್​ನಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಆರೋಪಿಯು ಧೂಮಪಾನ ಮಾಡುತ್ತಿದ್ದಾಗ ಫೈರ್ ಅಲರ್ಟ್​ ಅಲಾರಂ ಹೊಡೆದುಕೊಳ್ಳಲು ಶುರುವಾಗಿತ್ತು, ಆಗ ವಿಮಾನ ಸಿಬ್ಬಂದಿ ಆತನನ್ನು ಎಚ್ಚರಿಸಿ ಶೌಚಾಲಯದ ಹೊರಗೆ ಕರೆದುಕೊಂಡು ಬಂದಿದ್ದರು.

    MORE
    GALLERIES

  • 47

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಶೌಚಾಲಯದಿಂದ ಹೊರಗೆ ಕರೆತಂದರೂ ಆರೋಪಿಯು ತನ್ನ ಸೀಟ್‌ನಲ್ಲಿ ಕೂರಲು ಸಿದ್ಧನಿರಲಿಲ್ಲ. ಸೀಟಿನಲ್ಲಿ ಕೂಡಲು ಹೇಳಿದಾಗ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಜೊತೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ಸಹ ಪ್ರಯಾಣಿಕರೆಲ್ಲಾ ಸೇರಿ ಆತನ ಕೈಕಾಲು ಕಟ್ಟಿ ಕೂರಿಸಿದ್ದರು ಎಂದು ತಿಳಿದುಬಂದಿದೆ.

    MORE
    GALLERIES

  • 57

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಸಹ ಪ್ರಯಾಣಿಕರೆಲ್ಲಾ ಸೇರಿ ಆತನ ಕೈಕಾಲು ಕಟ್ಟಿ ಕೂರಿಸಿದ್ದಾಗಲೂ ಆತ ನಿಲ್ಲದೆ ತಲೆ ಚಚ್ಚಿಕೊಳ್ಳಲು ಶುರು ಮಾಡಿದ್ದ, ತಕ್ಷಣ ಅಲ್ಲಿಯೇ ಇದ್ದ ವೈದ್ಯರೊಬ್ಬರು ಆತನ ಬ್ಯಾಗ್​ನಲ್ಲಿ ಏನಾದರೂ ಔಷಧಿ ಇದೆಯೇ ಎಂಬುದನ್ನು ಪತ್ತೆ ಮಾಡಲು ಹೇಳಿದರು, ಆದರೆ ಬ್ಯಾಗ್​ನಲ್ಲಿ ಕೇವಲ ಸಿಗರೇಟ್​ ಮಾತ್ರ ಕಂಡುಬಂದಿತ್ತು.

    MORE
    GALLERIES

  • 67

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಆರೋಪಿ ರತ್ನಾಕರ್ ಕರುಂಕಂತ್ ದ್ವಿವೇದಿ ಭಾರತೀಯ ಮೂಲದವನಾಗಿದ್ದು ಆದರೆ ಅಮೆರಿಕದ ಪ್ರಜೆಯಾಗಿದ್ದಾನೆ. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 77

    Air India Flight: ವಿಮಾನದಲ್ಲಿ ಸಿಗರೇಟ್ ಸೇದಿ ಕಿರಿಕ್‌ ಮಾಡಿದ ಯುವಕನ ಕೈಕಾಲು ಕಟ್ಟಿ ಹಾಕಿದ ಪ್ರಯಾಣಿಕರು!

    ಸದ್ಯ ರತ್ನಾಕರ್ ಕರುಂಕಂತ್ ದ್ವಿವೇದಿಯ ವೈದ್ಯಕೀಯ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದ್ದು, ಆ ವೇಳೆ ಆತ ಕುಡಿದ ಅಮಲಿನಲ್ಲಿದ್ದನೋ ಅಥವಾ ಮಾನಸಿಕ ಅಸ್ವಸ್ಥನಾಗಿದ್ದನೋ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ.

    MORE
    GALLERIES