Railways: ಟ್ರೈನ್ ಟಿಕೆಟ್ ಮೇಲೆ ಶೇ.100 ರಷ್ಟು ರಿಯಾಯಿತಿ; ಯಾರಿಗೆಷ್ಟು ಗೊತ್ತೇ?
ಭಾರತೀಯ ರೈಲ್ವೆ ಇಲಾಖೆ ವಿವಿಧ ರೀತಿಯ ರಿಯಾಯಿತಿಗಳನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ. ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಸಂದರ್ಶನಕ್ಕೆ ಹೋಗುವವರಿಗೆ, ಹಿರಿಯ ನಾಗರಿಕರಿಗೆ ಸೇರಿದಂತೆ ಹಲವರಿಗೆ ಹಲವು ರೀತಿಯ ರಿಯಾಯಿತಿ ನೀಡಲು ನಿರ್ಧರಿಸಿದೆ.
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್ ಮೇಲೆ ರಿಯಾಯಿತಿ ನೀಡಲು ಮುಂದಾಗಿದೆ. ಕೆಲವರಿಗೆ ಮಾತ್ರ ನೂರಕ್ಕೆ ಶೇಕಡ ನೂರರಷ್ಟು ರಿಯಾಯಿತಿ ನೀಡಲಿದೆ.
2/ 8
ರೈಲಿನಲ್ಲಿ ಪ್ರಯಾಣಿಸುವವರಿಗೆ ಕೆಟಗಿರಿ ಆಧಾರದ ಮೇಲೆ ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಸಂಪೂರ್ಣ ಮಾಹಿತಿ http://www.indianrailways.gov.in ವೆಬ್ಸೈಟ್ನಲ್ಲಿ ದೊರೆಯಲಿದೆ.
3/ 8
ವಿದ್ಯಾರ್ಥಿಗಳಿಗೆ 12ನೇ ತರಗತಿಯವರೆಗೆ ಉಚಿತ ಸೆಕೆಂಡ್ ಕ್ಲಾಸ್ ಮಾಸಿಕ ಸೀಜನ್ ಟಿಕೆಟ್ ಪಡೆಯಬಹುದು. ಈ ಪೈಕಿ ಸಾಮಾನ್ಯ ಮತ್ತು ಹಿಂದುಳಿದವರಿಗೆ ಶೇ.50, ದಲಿತರಿಗೆ ಶೇ.75 ರಿಯಾಯಿತಿ ಸಿಗಲಿದೆ.
4/ 8
ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರ ಆಯೋಜಿಸಿದ ಕ್ಯಾಂಪ್, ಸೆಮಿನಾರ್ಗಳು ಅಥವಾ ಐತಿಹಾಸಿಕ ಪ್ರವಾಸಗಳಿಗೆ ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
5/ 8
ಯುಪಿಎಸ್ಸಿ ಮತ್ತು ಎಸ್ಎಸ್ಸಿ ಪರೀಕ್ಷೆಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ಸೆಕೆಂಡ್ ಕ್ಲಾಸ್ನಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
6/ 8
60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಎಲ್ಲಾ ಕ್ಲಾಸ್ಗಳಲ್ಲಿ ಶೇ.40 ರಷ್ಟು ರಿಯಾಯಿತಿ ಪಡೆಯಬಹುದು. 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಲ್ಲಾ ಕ್ಲಾಸ್ಗಳಲ್ಲಿ ಶೇ.50 ರಷ್ಟು ರಿಯಾಯಿತಿ ಪಡೆಯಬಹುದು.
7/ 8
ರೋಗಿಗಳು ಡೈಯಾಲಿಸಿಸ್ ಅಥವಾ ಹೃದಯ ರೋಗಕ್ಕೆ ಚಿಕಿತ್ಸೆ ಅಥವಾ ಕಿಡ್ನಿ ಜೋಡಣೆಗಾಗಿ ತೆರಳುತ್ತಿರುವವರಿಗೆ ರಿಯಾಯಿತಿ. ಫಸ್ಟ್ ಮತ್ತು ಸೆಕೆಂಡ್ ಕ್ಲಾಸ್ಗಳಲ್ಲಿ, 3ಎಸಿ ಮತ್ತು ಚೇರ್ ಕಾರ್ನಲ್ಲಿ ಶೇ.75 ರಷ್ಟು ರಿಯಾಯಿತಿ, ರೋಗಿಗಳೊಂದಿಗೆ ಪ್ರಯಾಣಿಸುವವರಿಗೂ ಶೇ.75 ರಷ್ಟು ರಿಯಾಯಿತಿ.
8/ 8
ಸೇನೆಯಲ್ಲಿ ಕಾರ್ಯನಿರ್ವಹಿಸುವಾಗ ಹುತಾತ್ಮರಾದ ಕುಟುಂಬದವರು ಸೆಕೆಂಡ್ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್ಗಳಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು.