Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

ಈ ಆ್ಯಂಬ್ಯುಲೆನ್ಸ್‌ಗಳು 108, 102 ಸೇವೆಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಉದ್ದೇಶಕ್ಕಾಗಿ ಪಶುಸಂಗೋಪನಾ ಇಲಾಖೆಯು ಟೋಲ್ ಫ್ರೀ ಡಯಲ್ ಸಂಖ್ಯೆ 1962 ಅನ್ನು ಸಹ ನೀಡಿದೆ.

First published:

  • 17

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಉತ್ತರ ಪ್ರದೇಶದ ಪಶುಸಂಗೋಪನಾ ಇಲಾಖೆ ಪ್ರಾಣಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹರಾನ್‌ಪುರದಲ್ಲಿ ಎರಡು ಪಶುವೈದ್ಯಕೀಯ ಆ್ಯಂಬುಲೆನ್ಸ್‌ಗಳನ್ನು ಪ್ರಾರಂಭಿಸಿದೆ. ಪಶು ಸಂಗೋಪನೆ ಮಾಡುವವರು ಇನ್ನು ಮುಂದೆ ಆಸ್ಪತ್ರೆಗೆ ತಿರುಗುವ ಅವಶ್ಯಕತೆಯಿಲ್ಲ. ಜಾನುವಾರು ಮಾಲೀಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಎರಡು ಸಂಚಾರಿ ಪಶುವೈದ್ಯಕೀಯ ಆ್ಯಂಬುಲೆನ್ಸ್‌ಗಳನ್ನು ಆರಂಭಿಸಲಾಗಿದ್ದು, ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    MORE
    GALLERIES

  • 27

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಈ ಆ್ಯಂಬುಲೆನ್ಸ್‌ಗಳು 108, 102 ಸೇವೆಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಉದ್ದೇಶಕ್ಕಾಗಿ ಪಶುಸಂಗೋಪನಾ ಇಲಾಖೆಯು ಟೋಲ್ ಫ್ರೀ ಡಯಲ್ ಸಂಖ್ಯೆ 1962 ಅನ್ನು ಸಹ ನೀಡಿದೆ. ಈ ನಂಬರ್​ಗೆ ನೀವು ಕರೆ ಮಾಡುವ ಮೂಲಕ ಪ್ರಾಣಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡಬಹುದು.

    MORE
    GALLERIES

  • 37

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಪಶುವೈದ್ಯರ ತಂಡ ಅಲ್ಲಿಗೆ ಆಗಮಿಸಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಹಸುಗಳು ಮತ್ತು ಎಮ್ಮೆಗಳನ್ನು ಹೊರತುಪಡಿಸಿ, ನಾಯಿಗಳು ಮತ್ತು ಬೆಕ್ಕುಗಳು ಸೇರಿದಂತೆ ಇತರ ಪ್ರಾಣಿಗಳಿಗೆ ಆ್ಯಂಬುಲೆನ್ಸ್​ನಲ್ಲಿ ಚಿಕಿತ್ಸೆ ನೀಡುವ ಈ ಸೇವೆಗಳು ಲಭ್ಯವಿದೆ.

    MORE
    GALLERIES

  • 47

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಈ ಆ್ಯಂಬುಲೆನ್ಸ್‌ನಲ್ಲಿ ನುರಿತ ಪಶುವೈದ್ಯರು, ಫಾರ್ಮಸಿಸ್ಟ್ ಮತ್ತು ಡ್ರೈವರ್ ಇರುತ್ತಾರೆ. ಇವರ ಜೊತೆ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳು ಮತ್ತು ಇತರ ವಸ್ತುಗಳು ಸಹ ಆಂಬ್ಯುಲೆನ್ಸ್‌ನಲ್ಲಿ ಲಭ್ಯವಿದೆ. ಅವರು ಘಟನಾ ಸ್ಥಳಕ್ಕೆ ತಲುಪಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಾರೆ.

    MORE
    GALLERIES

  • 57

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಪಶು ಸಂಗೋಪನಾ ಇಲಾಖೆಯ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಸುಮಾರು ಏಳು ಲಕ್ಷ ಜಾನುವಾರುಗಳಿವೆ. ಪ್ರತಿ ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶುವೈದ್ಯಕೀಯ ಆಂಬ್ಯುಲೆನ್ಸ್ ಸ್ಥಾಪಿಸಲು ಯೋಗಿ ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಜಿಲ್ಲೆಗೆ ಇನ್ನೂ ಐದು ಆಂಬ್ಯುಲೆನ್ಸ್‌ಗಳು ಲಭ್ಯವಾಗಲಿವೆ. ಇವುಗಳನ್ನು ಜಾನುವಾರು ಮಾಲೀಕರ ಹಿತಾಸಕ್ತಿಯಿಂದ ಆರಂಭಿಸಲಾಗಿದೆ.

    MORE
    GALLERIES

  • 67

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಆಂಧ್ರಪ್ರದೇಶದಲ್ಲೂ ಸಿಎಂ ಜಗನ್ ಈ ರೀತಿಯ ಸೇವೆಗಳನ್ನು ಆರಂಭಿಸಿದ್ದಾರೆ. ಫೋನ್ ಕರೆ ಮಾಡಿದ ತಕ್ಷಣ ಮೂಕಪ್ರಾಣಿಗಳಿಗೆ ಪ್ರಾಥಮಿಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮತ್ತು ಸಣ್ಣ ಪ್ರಾಣಿಗಳು, ಸಾಕುಪ್ರಾಣಿಗಳು, ಕೋಳಿಗಳು ಮತ್ತು ಪಕ್ಷಿಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಒದಗಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

    MORE
    GALLERIES

  • 77

    Ambulance for Animals: ಮನುಷ್ಯರಿಗಷ್ಟೇ ಅಲ್ಲ ಇನ್ಮುಂದೆ ಪ್ರಾಣಿ-ಪಕ್ಷಿಗಳಿಗೂ ಸಿಗಲಿದೆ ಆ್ಯಂಬುಲೆನ್ಸ್ ಸೇವೆ!

    ಈ ರಾಜ್ಯ ಸರ್ಕಾರದ ಪ್ರಯತ್ನವನ್ನು ಗುರುತಿಸಿರುವ ಕೇಂದ್ರವು ಇದೇ ನೀತಿಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಅಲ್ಲದೆ, ಯುಪಿಯಂತಹ ರಾಜ್ಯಗಳು ಕೂಡ ಈಗ ಅದೇ ಹಾದಿಯನ್ನು ಅನುಸರಿಸುತ್ತಿವೆ.

    MORE
    GALLERIES