ಹೆಂಡತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿರುವ ಗಂಡಂದಿರುತ್ತಾರೆ ಎನ್ನುವುದನ್ನ ಕೇಳಿದ್ದೇವೆ. ಎಷ್ಟೇ ಕಷ್ಟವಾದರೂ ಸರಿ ಅಡ್ಡದಾರಿಯಲ್ಲಾದರೂ ಹೋಗಿ ತನ್ನ ಪತ್ನಿಯ ಆಸೆ, ಬೇಕು ಬೇಡಗಳನ್ನು ಈಡೇರಿಸುವವರು ಇರುತ್ತಾರೆ. ಆದರೆ ಏನು ಮಾಡಿದರೂ ಅದು ಇತಿಮಿತಿಯಲ್ಲಿದ್ದರೆ ಸರಿ, ಅದನ್ನು ಬಿಟ್ಟು ನಿಯಮ, ಕಾನೂನಿಗೆ ವಿರುದ್ಧ ಹೋದರೆ ಏನಾಗುತ್ತದೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ವಾಸ್ತವವಾಗಿ ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯು ಎಲ್ಲಾ ಫೈಲ್‌ಗಳನ್ನು ಸಿಟಿ ಪೊಲೀಸ್ ಸ್ಪೆಷಲ್ ಬ್ರಾಂಚ್‌ಗೆ ಕಳುಹಿಸುತ್ತದೆ. ಅಲ್ಲಿಂದ ಅರ್ಜಿದಾರರ ಮಾಹಿತಿಗಾಗಿ ಸ್ಥಳೀಯ ಪೊಲೀಸರನ್ನು ಕಳುಹಿಸಲಾಗುತ್ತದೆ. ಅವರು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಮತ್ತು ಫೈಲ್ ಅನ್ನು ಪಾಸ್‌ಪೋರ್ಟ್ ಕಚೇರಿಗೆ ಕಳುಹಿಸಲಾಗುತ್ತದೆ. ಆದರೆ ಯಾವುದೇ ಪರಿಶೀಲನೆಯಿಲ್ಲದೆ ಶೀಘ್ರವಾಗಿ ತನ್ನ ಪತ್ನಿಯ ಲೈನ್ ಕ್ಲಿಯರ್ ಆಗುವಂತೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಒಂದು ವೇಳೆ ಈ ವಿಷಯ ಪೊಲೀಸರಿಗೆ ಗೊತ್ತಾಗಿಬಿಟ್ಟರೆ ಎಂದು ಯೋಚಿಸಿದ ಶಾ ತನ್ನ ಹೆಂಡತಿಯ ಫೈಲ್ ಮಾತ್ರವಲ್ಲದೆ ಇನ್ನೂ ಮೂರು ಫೈಲ್‌ಗಳನ್ನು ಕ್ಲಿಯರ್ ಮಾಡಿದ್ದಾನೆ. ಆದರೆ ಪೊಲೀಸರಿಗೆ ಅನುಮಾನ ಬಂದು ತಮ್ಮದೇ ಶೈಲಿಯಲ್ಲಿ ತನಿಖೆ ಆರಂಭಿಸಿದಾಗ ಶಾ ಸಿಸ್ಟಮ್ ಹ್ಯಾಕ್ ಮಾಡಿರುವುದು ಪತ್ತೆಯಾಗಿದೆ. ಐಪಿ ವಿಳಾಸದ ಆಧಾರದ ಮೇಲೆ ಆರೋಪಿಯ ಮನೆಯನ್ನು ಪತ್ತೆ ಹಚ್ಚಲಾಗಿದ್ದು, ಆತನನ್ನು ಬಂಧಿಸಿದ್ದಾರೆ.