Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಗ್ ಮಾಡಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ನಡೆದಿದ್ದೇನು? ಇಲ್ಲಿದೆ ಘಟನೆ ವಿವರ

First published:

  • 16

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಭಾನುವಾರದಂದು ಪಕ್ಷಿಯೊಂದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಾರಣಾಸಿಯ ರಿಸರ್ವ್ ಪೊಲೀಸ್ ಲೈನ್ಸ್ ಮೈದಾನದಿಂದ ಹೆಲಿಕಾಪ್ಟರ್ ಲಖನೌಗೆ ತೆರಳುತ್ತಿದ್ದಂತೆ ಈ ಘಟನೆ ನಡೆದಿದೆ.

    MORE
    GALLERIES

  • 26

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಮುಖ್ಯಮಂತ್ರಿಗಳು ಸರ್ಕ್ಯೂಟ್ ಹೌಸ್‌ಗೆ ಹಿಂತಿರುಗಿದ್ದಾರೆ ಎಂದು ಆರಂಭಿಕ ಮಾಹಿತಿಗಳು ಸೂಚಿಸುತ್ತವೆ. ಇದೀಗ ಅವರು ಸರ್ಕಾರಿ ವಿಮಾನದ ಮೂಲಕ ಲಕ್ನೋಗೆ ತೆರಳಲಿದ್ದಾರೆ.

    MORE
    GALLERIES

  • 36

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಮುಖ್ಯಮಂತ್ರಿಯವರ ಹೆಲಿಕಾಪ್ಟರ್‌ನಿಂದ ಲಕ್ನೋಗೆ ಟೇಕ್ ಆಫ್ ಆದ ನಂತರ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ನಂತರ ಅದು ಇಲ್ಲಿ ಇಳಿಯಬೇಕಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

    MORE
    GALLERIES

  • 46

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಶನಿವಾರ ವಾರಾಣಸಿಗೆ ಆಗಮಿಸಿದ್ದ ಸಿಎಂ, ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಭಿವೃದ್ಧಿ ಕಾಮಗಾರಿ ಹಾಗೂ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದರು. ವಾರಣಾಸಿಯಲ್ಲಿ ರಾತ್ರಿ ತಂಗಿದ್ದ ಅವರು ಭಾನುವಾರ ಬೆಳಗ್ಗೆ ಲಕ್ನೋ ತೆರಳುತ್ತಿದ್ದರು.

    MORE
    GALLERIES

  • 56

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಇದಕ್ಕೂ ಮುನ್ನ ಶನಿವಾರ ಆದಿತ್ಯನಾಥ್ ಅವರು ಲಕ್ನೋದಲ್ಲಿ ಸ್ವಾಮಿತ್ವ ಯೋಜನೆಯಡಿ 11 ಲಕ್ಷ ಕುಟುಂಬಗಳಿಗೆ ಆನ್‌ಲೈನ್ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ವಿತರಿಸಿದರು. ಲೋಕಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಅವರು ದಾಖಲೆಗಳನ್ನು ವಿತರಿಸಿ ಸ್ವಾವಲಂಬಿ ರಾಜ್ಯ ನಿರ್ಮಾಣಕ್ಕೆ ಒತ್ತು ನೀಡಿದರು.

    MORE
    GALLERIES

  • 66

    Emergency Landing: ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದೇನು?

    ಎರಡು ವರ್ಷಗಳ ಹಿಂದೆ ದೇಶಾದ್ಯಂತ ಗ್ರಾಮೀಣ ವಸತಿ ದಾಖಲೆಗಳ ಯೋಜನೆಯನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ ಆದಿತ್ಯನಾಥ್, ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಮತ್ತು ದೀರ್ಘಾವಧಿಯಲ್ಲಿ ಸ್ವಾವಲಂಬಿಗಳಾಗಲು ಗ್ರಾಮಸ್ಥರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

    MORE
    GALLERIES