Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

ಜಿನೇವಾ: ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ಭಾಗವಹಿಸಿದ್ದರು ಎನ್ನಲಾಗಿದೆ. ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

First published:

  • 18

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಮಹಾಸಭೆಯಲ್ಲಿ ಸಾಮಾಜಿಕ, ಆರ್ಥಿಕ ವಿಚಾರಗಳನ್ನು ಚರ್ಚಿಸಲಾಯಿತು ಎಂದು ಕೈಲಾಸ ಎಸ್‌ಪಿಹೆಚ್ ನಿತ್ಯಾನಂದ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

    MORE
    GALLERIES

  • 28

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಈ ಸಭೆಯಲ್ಲಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಹೇಳಿರುವ ವಿಜಯಪ್ರಿಯಾ ನಿತ್ಯಾನಂದ ಸಹ ಭಾಗವಹಿಸಿದ್ದರು. ಅಲ್ಲಿ ನಿತ್ಯಾನಂದ ಭಾರತ ದೇಶದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 38

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಅಲ್ಲದೇ, ಕೈಲಾಸ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ. ಅದನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ ಎಂದು ನಿತ್ಯಾನಂದನ ಶಿಷ್ಯರು ಪ್ರತಿಪಾದಿಸಿದ್ದಾರೆ.

    MORE
    GALLERIES

  • 48

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ನಿತ್ಯಾನಂದ ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿಶೈವ, ಸ್ಥಳೀಯ ಬುಡಕಟ್ಟು ಸೇರಿ ಹಿಂದೂ ಧರ್ಮದ 10 ಸಾವಿರ ಸಂಪ್ರದಾಯಗಳನ್ನ ಪುನರುಜ್ಜೀವನಗೊಳಿಸಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿದೆ ಎಂದು ವಿಜಯಪ್ರಿಯ ಹೇಳಿದ್ದಾರೆ

    MORE
    GALLERIES

  • 58

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ನಾನಾ ದೇಶಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಹಿಂಸೆಗಳು, ಪುರುಷ ಪ್ರಧಾನ ಸಮಾಜಗಳಲ್ಲಿ ಒಳಗಾಗುತ್ತಿರುವ ಅಪಮಾನಗಳ ಬಗ್ಗೆ ಇತರ ಪ್ರತಿನಿಧಿಗಳು ಚರ್ಚಿಸಿದ್ದಾರೆ.

    MORE
    GALLERIES

  • 68

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಜಗತ್ತಿನಲ್ಲಿ ಶೇ.82ರಷ್ಟು ಮಹಿಳೆಯರು ಪದೇ ಪದೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕಾಗಿ ಶೇ. 42ರಷ್ಟು ಮಹಿಳೆಯರು, ಅತ್ಯಾಚಾರ ಸೇರಿದಂತೆ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ಮಹಿಳಾ ಪ್ರತಿನಿಧಿಗಳು ಹೇಳಿದ್ದಾರೆ.

    MORE
    GALLERIES

  • 78

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ 2010ರಲ್ಲಿ ಕರ್ನಾಟಕ ಸೆಷನ್ಸ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

    MORE
    GALLERIES

  • 88

    Kailasa: ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಸ್ವಾಮಿ ನಿತ್ಯಾನಂದನ ಕೈಲಾಸದ ಮಹಿಳಾ ಪ್ರತಿನಿಧಿ!

    ಗುಜರಾತ್ ಆಶ್ರಮದಲ್ಲಿಯೂ ಸ್ವಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಚಿತ್ರಹಿಂಸೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿತ್ತು.

    MORE
    GALLERIES