ಪೂನಂ ಕುಮಾರಿ ವರ್ಮಾ ಎಂಬುವರೇ ಆಸ್ಪತ್ರೆಯಲ್ಲಿ ಮೃತಪಟ್ಟ ತಾಯಿ. ಅವರು ತಮ್ಮ ಮಗಳು ಚಾಂದಿನಿ ಕುಮಾರಿಗೆ ಇಂಜಿನಿಯರ್ ಆಗಿರುವ ಸುಮಿತ್ ಗೌರವ್ ಅವರೊಂದಿಗೆ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಾಗ, ನಿಶ್ಚಿತಾರ್ಥದ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಇಬ್ಬರನ್ನೂ ಮದುವೆಯಾಗುವಂತೆ ಒತ್ತಾಯಿಸಿದಳು. ಇದಾದ ಬಳಿಕ ಐಸಿಯುನಲ್ಲಿ ಮದುವೆ ಮಾಡಲಾಗಿತ್ತು.