ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸುವ ಯುಟ್ಯೂಬ್ ಮೂಲಕ ಹಣ ಗಳಿಸಬಹುದು ಎಂಬುದು ಬಹುತೇಕರಿಗೆ ಗೊತ್ತಿದೆ. ಗೂಗಲ್ ಜಿಮೇಲ್ ಖಾತೆ ಹೊಂದಿದ್ದ ಪ್ರತಿಯೊಬ್ಬ ವ್ಯಕ್ತಿಯು ಯುಟ್ಯೂಬ್ ಮೂಲಕ ವಿಡಿಯೋ ಹರಿಯಬಿಟ್ಟು ಹಣ ಗಳಿಸಬಹುದಾಗಿದೆ. ಅಷ್ಟೇ ಏಕೆ ಭಾರತದಾದ್ಯಂತ ಅನೇಕರು ವ್ಲಾಗ್ ಅಥವಾ ವೆಡ್ಡಿಂಗ್ ವಿಡಿಯೋ. ಆಲ್ಬಂ ಸಾಂಗ್ ಹೀಗೆ ನಾನಾ ವಿಧದ ವಿಡಿಯೋ ಹರಿಯ ಬಿಡುವ ಮೂಲಕ ಲಕ್ಷಾಂತರ ಹಣ ಗಳಿಸುವವರು ಇದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ನಿತಿನ್ ಗಡ್ಕರಿ ಕೂಡ ಯುಟ್ಯೂಬ್ ನಿಂದ ಲಕ್ಷಾಂತರ ರೂಪಾಯಿ ಮೂಲಕ ದುಡಿಯುತ್ತಿದ್ದಾರೆ ಎಂಬುದು ಗೊತ್ತಿದ್ಯಾ?
ಇನ್ನು ಟ್ವಿಟ್ಟರ್ನಲ್ಲಿ 92 ಲಕ್ಷ ಅನುಯಾಯಿ, ಫೇಸ್ಬುಕ್ನಲ್ಲಿ 16 ಲಕ್ಷ ಅನುಯಾಯಿಗಳು, ಇನ್ಸ್ಟಾಗ್ರಾಮ್ನಲ್ಲಿ 13 ಲಕ್ಷ ಅನುಯಾಯಿಗಳು ಮತ್ತು ಯೂಟ್ಯೂಬ್ನಲ್ಲಿ ಎರಡು ಲಕ್ಷ ಅನುಯಾಯಿಗಳನ್ನು ಗಡ್ಕರಿ ಹೊಂದಿದ್ದಾರೆ. 2015ರಲ್ಲಿ ಗಡ್ಕರಿ ಯ್ಯೂಟೂಬ್ ಖಾತೆ ತೆರೆದರು. ಅವರ ಎಲ್ಲಾ ಭಾಷಣಗಳು, ಪತ್ರಿಕಾಗೋಷ್ಠಿಗಳು ಮತ್ತು ಮಾಧ್ಯಮ ಬೈಟ್ಗಳನ್ನು ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.