ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರು ಅಪಘಾತಗೊಂಡಿದೆ. ಸಚಿವರು ಪ್ರಯಾಣಿಸುತ್ತಿದ್ದ ವೇಳೆಯೇ ಕಾರು ಅಪಘಾತಕ್ಕೆ ಒಳಗಾಗಿದೆ ಅಂತ ತಿಳಿದು ಬಂದಿದೆ.
2/ 7
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಕೇಂದ್ರ ಸಚಿವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3/ 7
ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದ ಬುಲೆಟ್ ಫ್ರೂಪ್ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿಗೆ ಗಂಭೀರ ಪ್ರಮಾಣದ ಹಾನಿಯಾಗಿದೆ ಎನ್ನಲಾಗುತ್ತಿದೆ.
4/ 7
ಜಮ್ಮು-ಶ್ರೀನಗರ ಹೆದ್ದಾರಿಯ ರಾಂಬನ್ ಬಳಿ ಸಂಪೂರ್ಣ ಲೋಡ್ ಆಗಿದ್ದ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5/ 7
ಕಾನೂನು ಸೇವೆಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್ಪುರಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದರು. ಆಗ ಅಪಘಾತ ನಡೆದಿದೆ.
6/ 7
ಎಲ್ಲರೂ ಸುರಕ್ಷಿತವಾಗಿದ್ದು, ಸಣ್ಣಪುಟ್ಟ ಅಪಘಾತವಾಗಿದ್ದು, ಎಲ್ಲವೂ ನಿಯಂತ್ರಣದಲ್ಲಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂದು ಎಡಿಜಿ ಮುಖೇಶ್ ಸಿಂಗ್ ಹೇಳಿದ್ದಾರೆ.
7/ 7
ಅಪಘಾತಕ್ಕೂ ಮುನ್ನ ಉಧಂಪುರದಿಂದ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗದ ಮೂಲಕ ತಮ್ಮ ಬೆಂಗಾವಲು ಪಡೆ ಸಾಗುತ್ತಿರುವ ವಿಡಿಯೋವನ್ನು ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದರು.
First published:
17
Kiren Rijiju: ಕೇಂದ್ರ ಸಚಿವರ ಕಾರು ಅಪಘಾತ, ಅಪಾಯದಿಂದ ಪಾರಾದ ಕಿರಣ್ ರಿಜಿಜು