Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದಾದ್ಯಂತ ಸಾಕಷ್ಟು ಹಾನಿಯಾಗಿದೆ. ಈ ನಡುವೆ ಸಾವಿನ ಸಂಖ್ಯೆ ಮತ್ತೊಮ್ಮೆ ಏರಿಕೆಯಾಗಿದೆ. ವರದಿಗಳ ಪ್ರಕಾರ, ಮಳೆ ಸಂಬಂಧಿತ ಘಟನೆಗಳ ನಡುವೆ 52 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 5 ಜನರು ಕಾಣೆಯಾಗಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾ ಆಗಿರುವ ಅನಾಹುತ ಸಂಬಂಧ ಇಂದು ಗೃಹ ಸಚಿವ ಅಮಿತ್​ ಶಾ ನೆರೆ ವೀಕ್ಷಣೆ ನಡೆಸಿದರು

First published:

 • 16

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ಭಾರೀ ಮಳೆ ಮತ್ತು ಭೂಕುಸಿತದಿಂದ ಹದಿನೇಳು ಜನರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಚಾರಣೆಗೆ ಮುಂದಾಗಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರ ರಕ್ಷಣೆಗೆ 17 NDRF ತಂಡಗಳು, 7 SDRF ತಂಡಗಳು, 15 PAC ಪಡೆ , 5000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

  MORE
  GALLERIES

 • 26

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ರಾಜ್ಯದಲ್ಲಿ ಇಂದು ನೆರೆ ವೀಕ್ಷಣೆ ನಡೆಸಿದ ಗೃಹ ಸಚಿವ ಅಮಿತ್​ ಶಾ, ಸಕಲ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ರಾಜ್ಯದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮಳೆಯಿಂದ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. 16,000 ಕ್ಕೂ ಹೆಚ್ಚು ಮುನ್ನೆಚ್ಚರಿಕೆ ಸ್ಥಳಾಂತರಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  MORE
  GALLERIES

 • 36

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ರಾಜ್ಯದಲ್ಲಿ ಈವರೆಗೆ 64 ಸಾವುಗಳು, 11 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಎರಡು ಟ್ರೆಕ್ಕಿಂಗ್ ತಂಡಗಳಲ್ಲಿ ಒಂದು ತಂಡ ಕಣ್ಮರೆಯಾಗಿದೆ. ನೈನಿತಾಲ್, ಅಲ್ಮೋರಾ, ಹಲ್ದ್ವಾನಿಗಳಲ್ಲಿ ರಸ್ತೆಗಳನ್ನು ತೆರವುಗೊಳಿಸಲಾಗಿದೆ.

  MORE
  GALLERIES

 • 46

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ರಾಜ್ಯದಲ್ಲಿ ವಿದ್ಯುತ್ ಕೇಂದ್ರಗಳು ಶೀಘ್ರವೇ ಕಾರ್ಯಾಚರಣೆ ಪುನರಾರಂಭಿಸಲಿವೆ. ರಾಜ್ಯದ 80% ರಷ್ಟು ಮೊಬೈಲ್ ನೆಟ್ವರ್ಕ್ ಅನ್ನು ಮರುಸ್ಥಾಪಿಸಲಾಗಿದೆ ಎಂದು ಅಮಿತ್​ ಶಾ ತಿಳಿಸಿದ್ದಾರೆ

  MORE
  GALLERIES

 • 56

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ನೈನಿತಾಲ್​ ಜಿಲ್ಲೆ ಮಳೆಯಿಂದಾಗಿ ಹೆಚ್ಚು ಹಾನಿಗೊಂಡಿದೆ. ಇಲ್ಲಿ 28 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ಭೂಕುಸಿತದಿಂದಾಗಿ ಎಲ್ಲಾ ಹೆದ್ದಾರಿಗಳ ಮಾರ್ಗ ಬಂದ್​ ಆಗಿದೆ. ಭಾರೀ ಮಳೆಯಿಂದಾಗಿ ಕೇದಾರನಾಥ್​, ಗಂಗೋತ್ರಿ ಯಾತ್ರೆ ರದ್ದು ಮಾಡಲಾಗಿದೆ.

  MORE
  GALLERIES

 • 66

  Uttarakhand rains: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

  ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ. ಪ್ರವಾಹದಿಂದ ಹಾನಿಗೊಳಗಾದ ಪ್ರತಿ ಜಿಲ್ಲೆಗೆ 10 ಕೋಟಿ ರೂಪಾಯಿಗಳನ್ನು ಪರಿಹಾರ ಕಾರ್ಯಗಳಿಗಾಗಿ ಮಂಜೂರು ಮಾಡಿದರು

  MORE
  GALLERIES