ಅವರ ಯೋಜನೆಯಂತೆ ಅಕ್ಕ ಯಾವುದೋ ನೆಪದಲ್ಲಿ ಮುಖೇಶ್‌ನನ್ನು ಮನೆಗೆ ಕರೆಸಿ ಕಂಠಪೂರ್ತಿ ಕುಡಿಸಿದ್ದಾರೆ. ಇದಾದ ನಂತರ ಎಲ್ಲರೂ ಸೇರಿ ರಾಜಪುರದ ವಾರದ ಮಾರುಕಟ್ಟೆಗೆ ಭೇಟಿ ನೀಡಲು ಹೋಗಿದ್ದಾರೆ. ವಾಪಸು ಬರುವಾಗ ಸಹೋದರಿಯರಿಬ್ಬರೂ ಮುಖೇಶ್ ಮೇಲೆ ದೊಣ್ಣೆ, ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ. ಆತನನನು ಹೊಡೆದು ಸಾಯಿಸಿ ಶವವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ