Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

ಲಕ್ನೋ: ಹಿಂದೆ ಗುರುಗಳ ದಾಸನಾಗೋವರೆಗೆ ವಿದ್ಯೆ ಧಕ್ಕದು ಎಂಬ ಮಾತು ಇತ್ತು. ಆದರೆ ಈಗ ಕಾಲ ಬದಲಾಗಿದೆ. ಆನ್ ಲೈನ್ ಕ್ಲಾಸ್ ಗಳು ಶುರುವಾದ ಮೇಲಂತೂ ಟೀಚರ್ಸ್-ಸ್ಟೂಡೆಂಟ್ಸ್ ಸಂವಹನವೇ ಬದಲಾಗಿ ಹೋಗಿದೆ. ಇಲ್ಲೊಂದು ಪ್ರಕರಣದಲ್ಲಿ ಇಬ್ಬರು ಶಿಕ್ಷಕರು ಒಬ್ಬಳೇ ವಿದ್ಯಾರ್ಥಿಯನ್ನು ಪ್ರೀತಿಸಿ ದುರಂತ ಅಂತ್ಯ ಕಂಡಿದ್ದಾರೆ.

First published:

  • 18

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ವಿಚಿತ್ರ ಪ್ರಕರಣ ನಡೆದಿರೋದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಕುರೈಥಿ ಎಂಬಲ್ಲಿ. ಇಲ್ಲಿನ ಖಾಸಗಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹಾಗೂ ವಿದ್ಯಾರ್ಥಿನಿಯ ಮಧ್ಯೆ ತ್ರಿಕೋನ ಪ್ರೇಮ ಕಥೆ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಖಾಸಗಿ ಶಾಲೆಯಲ್ಲಿ ಅನೂಜ್ ಹಾಗೂ ಸೂರಜ್ ಎಂಬುವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಬ್ಬರಿಗೊಬ್ಬರು ಗೊತ್ತಿಲ್ಲದೇ ಒಂದೇ ವಿದ್ಯಾರ್ಥಿನಿಯನ್ನು 3 ವರ್ಷಗಳಿಂದ ಪ್ರೀತಿಸುತ್ತಿದ್ದರು.

    MORE
    GALLERIES

  • 38

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಇಬ್ಬರು ಶಿಕ್ಷಕರು ಪ್ರೀತಿಸುತ್ತಿದ್ದ ವಿಷಯ ವಿದ್ಯಾರ್ಥಿನಿಗೆ ಗೊತ್ತಿತ್ತೋ ಗೊತ್ತಿಲ್ಲವೋ ಎಂಬುವುದು ಸ್ಪಷ್ಟ ಇಲ್ಲ. ಆದರೆ ವಿದ್ಯಾರ್ಥಿನಿ, ಶಿಕ್ಷಕ ಸೂರಜ್ ಗೆ ಮನಸ್ಸು ಕೊಟ್ಟಿದ್ದಳು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಅಲ್ಲಿಗೆ ಶಿಕ್ಷಕ ಸೂರಜ್, ವಿದ್ಯಾರ್ಥಿನಿಯದ್ದು ಲವ್ ಸ್ಟೋರಿ ನಡೆಯುತ್ತಿತ್ತು. ಈ ವಿಷಯ ಅನೂಜ್ ಕಿವಿಗೆ ಬಿದ್ದಿದೆ. ನಾನು ಪ್ರೀತಿಸುತ್ತಿರುವ ವಿದ್ಯಾರ್ಥಿನಿಯನ್ನು ಸಹೋದ್ಯೋಗಿ ಸೂರಜ್ ಪ್ರೀತಿಸುತ್ತಿರುವುದನ್ನು ಕೇಳಿ ಕೆರಳಿ, ಆತನ ಬಳಿ ಹೋಗಿ ಜಗಳ ತೆಗೆದಿದ್ದಾನೆ.

    MORE
    GALLERIES

  • 58

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಯುವತಿ, ನನ್ನ ಲವ್ ಸ್ಟೋರಿ ಮಧ್ಯೆ ನೀನು ಬಂದಿದ್ದೀಯ ಎಂದು ಸೂರಜ್ ಸಹಶಿಕ್ಷಕನ ವಿರುದ್ಧ ಹರಿಹಾಯ್ದಿದ್ದಾನೆ. ಆಗ ಅನೂಜ್ ಸ್ನೇಹಿತನ ಜೊತೆ ಸೇರಿಕೊಂಡು ಪ್ರೀತಿಗೆ ಅಡ್ಡಿ ಬಂದ ಸೂರಜ್ ನನ್ನು ಕೊಲೆ ಮಾಡಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಸ್ನೇಹಿತನ ಜೊತೆ ಸೇರಿಕೊಂಡು ಸಹ ಶಿಕ್ಷಕ ಸೂರಜ್ ನನ್ನು ಅನೂಜ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸೂರಜ್ ಮೃತದೇಹವನ್ನು ಬಾವಿಗೆ ಬಿಸಾಡಿದ್ದಾರೆ.

    MORE
    GALLERIES

  • 78

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ದಿನ ಬೆಳಗಾಗುವುದರೊಳಗೆ ಅನೂಜ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆ ಪ್ರಕರಣ ಬಯಲಾಗಿ ಜೈಲು ಸೇರುವ ಭಯದಲ್ಲಿ, ಮಾನ ಹೋಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    MORE
    GALLERIES

  • 88

    Crime News: ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರು ಶಿಕ್ಷಕರು.. ತ್ರಿಕೋನ ಪ್ರೇಮ ಕಥೆಯ ದುರಂತ ಅಂತ್ಯ!

    ಸೂರಜ್ ಕೊಲೆಯಾದರೆ, ಅನೂಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆಗೆ ಸಹಾಯ ಮಾಡಿದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದೇ ವಿದ್ಯಾರ್ಥಿನಿಯ ಹಿಂದೆ ಬಿದ್ದ ಇಬ್ಬರೂ ಶಿಕ್ಷಕರು ದುರಂತ ಅಂತ್ಯ ಕಂಡಿದ್ದಾರೆ.

    MORE
    GALLERIES