ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ನಾಗ್ಭಿದ್ ತಹಸಿಲ್‌ನ ಸತ್ಬಾಹಿನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರೆಲ್ಲ ಜೇನು ನೊಣದ ಹಿಂಡಿನ ದಾಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
2/ 7
ಗಾಯಗೊಂಡಿರುವ ಜನರ ಪೈಕಿ ಆರು ತಿಂಗಳ ಮಗು ಕೂಡ ಸೇರಿದ್ದು, ನಾಲ್ವರು ಗಾಯಾಳುಗಳು ನಾಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಹ್ಮಪುರಿ ವಿಭಾಗದ ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
3/ 7
ಇನ್ನು ಜೇನು ನೊಣಗಳ ಹಿಂಡು ಏಕಾಏಕಿ ದಾಳಿ ಮಾಡಿದ್ದರಿಂದ ಇಬ್ಬರು ಸಂತ್ರಸ್ತರು ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.
4/ 7
ಬಳಿಕ ನಾಪತ್ತೆಯಾಗಿರುವವರು ಸಿಕ್ಕಿದ್ದು, ಆ ಪೈಕಿ ಒಬ್ಬರು ಆಗಲೇ ಮೃತಪಟ್ಟಿದ್ದರೆ, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
5/ 7
ಜಿಲ್ಲಾ ಕೇಂದ್ರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಸತ್ಬಾಹಿನಿ ದೇವಸ್ಥಾನಕ್ಕೆ ಸಂಜೆ ಭೇಟಿ ನೀಡಿದಾಗ, ಜೇನುನೊಣಗಳ ಹಿಂಡು ಆರು ಮಂದಿಯ ಮೇಲೆ ದಾಳಿ ಮಾಡಿದೆ.
6/ 7
ಜೇನುನೊಣಗಳ ದಾಳಿಯ ಹಿನ್ನೆಲೆಯಲ್ಲಿ ಕತ್ತಲಾದ ನಂತರ ಅರಣ್ಯ ಪ್ರದೇಶದಲ್ಲಿರುವ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.
7/ 7
ಜೇನು ನೊಣದ ಹಿಂಡಿನ ದಾಳಿ ನಡೆದ ನಂತರ ಆ ಭಾಗಕ್ಕೆ ಸಾರ್ವಜನಿಕರು ಹೋಗಲು ಹಿಂದೇಟು ಹಾಕುತ್ತಿದ್ದು, ನಮಗೂ ದಾಳಿ ಮಾಡಬಹುದು ಎಂದು ಜನರು ಆತಂಕಗೊಂಡಿದ್ದಾರೆ.
First published:
17
Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ