Shocking News: ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ರೇಪ್ ಸಂತ್ರಸ್ತೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿದ ಕಾಮುಕರು!
ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಮನೆಗೆ ಬೆಂಕಿ ಹಚ್ಚಿ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೆಂಕಿ ಹಚ್ಚಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಶಿಶುಗಳಿಗೆ ಸುಟ್ಟ ಗಾಯಗಳೂ ಆಗಿವೆ.!
ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಕೃತ್ಯ ನಡೆದಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ಇಬ್ಬರು ಅಪರಾಧಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದು, ಅಲ್ಲದೇ ಕುಟುಂಬದ ಸದಸ್ಯರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ವರದಿಯಾಗಿದೆ.
2/ 7
2021ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ರೋಷನ್, ಸತೀಶ್, ಅರುಣ್, ರಂಜಿತ್ ಮತ್ತು ಅಮನ್ ಎಂಬ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದರು.
3/ 7
ಆ ಪೈಕಿ ಒಂದು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಇಬ್ಬರು ಅಪರಾಧಿಗಳಾದ ಅಮನ್ ಮತ್ತು ಸತೀಶ್, ಸೋಮವಾರ ಸಂಜೆ ಸಂತ್ರಸ್ತೆಯ ಮನೆಗೆ ನುಗ್ಗಿ ಕೇಸ್ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ.
4/ 7
ಸಂತ್ರಸ್ತೆಯ ಮನೆಯವರು ಕೇಸ್ ಹಿಂಪಡೆಯಲು ಒಪ್ಪದಿದ್ದಕ್ಕೆ ಕೆರಳಿದ ಕ್ರಿಮಿನಲ್‌ಗಳು ಮನೆಯಲ್ಲಿದ್ದ ಸದಸ್ಯರಿಗೆ ಥಳಿಸಿ ಮನೆಗೆ ಬೆಂಕಿ ಹಚ್ಚಿದ್ದಾರೆ.
5/ 7
ಮೌರವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಘಟನೆಯಲ್ಲಿ ಏಳು ತಿಂಗಳ ಗಂಡು ಶಿಶು ಮತ್ತು ಅವರ ಸಂಬಂಧಿಯ ಎರಡು ತಿಂಗಳ ಹೆಣ್ಣು ಶಿಶುವಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
6/ 7
ಘಟನೆ ಸಂಬಂಧ ಸಂತ್ರಸ್ತೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ.
7/ 7
ಮೂಲಗಳ ಪ್ರಕಾರ ಆರೋಪಿಗಳಿಗೆ ರಾಜಕಾರಣಿಗಳ ನಂಟಿದ್ದು, ಪ್ರಭಾವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಂತ್ರಸ್ತ ಬಾಲಕಿಯ ಮನೆಯವರು ಬಡವರು ಆದ ಕಾರಣ ಪ್ರಕರಣವನ್ನು ಮುಚ್ಚಿ ಹಾಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
First published:
17