MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

ಕಲಿಯಲು ವಯಸ್ಸಿಲ್ಲ ಅಗತ್ಯವಿಲ್ಲ ಎಂಬ ಮಾತಿದೆ. ಈ ಮಾತನ್ನ ಉತ್ತರ ಪ್ರದೇಶದ ಮಾಜಿ ಸಚಿವ ಪ್ರಭುದಯಾಳ್ ವಾಲ್ಮೀಕಿ ಮತ್ತು ಮಾಜಿ ಶಾಸಕ ರಾಜೇಶ್ ಮಿಶ್ರಾ ನಿಜವಾಗಿಸಿದ್ದಾರೆ. ಅವರಿಬ್ಬರು 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಮಾದರಿಯಾಗಿದ್ದಾರೆ.

  • Local18
  • |
  •   | Uttar Pradesh, India
First published:

  • 18

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಕಲಿಯಲು ವಯಸ್ಸಿನ ಅಗತ್ಯವಿಲ್ಲ ಎಂಬ ಮಾತಿದೆ. ಈ ಮಾತನ್ನ ಉತ್ತರ ಪ್ರದೇಶದ ಮಾಜಿ ಸಚಿವ ಪ್ರಭುದಯಾಳ್ ವಾಲ್ಮೀಕಿ ಮತ್ತು ಮಾಜಿ ಶಾಸಕ ರಾಜೇಶ್ ಮಿಶ್ರಾ ನಿಜವಾಗಿಸಿದ್ದಾರೆ. ಅವರಿಬ್ಬರು 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಮಾದರಿಯಾಗಿದ್ದಾರೆ.

    MORE
    GALLERIES

  • 28

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಈ ಇಬ್ಬರೂ ಬಹಳ ವರ್ಷಗಳ ಹಿಂದೆಯೇ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆದರೆ ತಮ್ಮ ಅಧ್ಯಯನವನ್ನು ಮುಂದುವರಿಸುವ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದರು.

    MORE
    GALLERIES

  • 38

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಮೀರತ್‌ನ ಹಸ್ತಿನಾಪುರ ಕ್ಷೇತ್ರದಿಂದ ಎರಡು ಬಾರಿ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಅವರು 59 ನೇ ವಯಸ್ಸಿನಲ್ಲಿ ಯುಪಿ ಬೋರ್ಡ್‌ನ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಅವರು ಈ ಪರೀಕ್ಷೆಯಲ್ಲಿ 271 ಅಂಕ ಪಡೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    MORE
    GALLERIES

  • 48

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ರಾಜ್ಯದ ರೇಷ್ಮೆ ಉದ್ಯಮ ಖಾತೆ ರಾಜ್ಯ ಸಚಿವರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಅವರು 10ನೇ ತರಗತಿಯನ್ನು ಪಾಸ್​ ಮಾಡಿದ್ದರು. ಈ ವರ್ಷ, ಅವರು ಬಾಗ್‌ಪತ್‌ನ ಜೋಹ್ರಿಯ ಆದರ್ಶ ಇಂಟರ್ ಕಾಲೇಜಿನಿಂದ ಇಂಟರ್ ಪರೀಕ್ಷೆಗೆ ಹಾಜರಾಗಿದ್ದರು. ಮಂಗಳವಾರ ಬಂದ ಫಲಿತಾಂಶದಲ್ಲಿ ಸೆಕೆಂಡ್​ ಕ್ಲಾಸ್​ನಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಭುದಯಾಳ್ ಅವರು ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಪ್ರೇರಣೆಯಿಂದ ಮತ್ತೆ ಅಧ್ಯಯನ ಆರಂಭಿಸಿರುವುದಾಗಿ ತಿಳಿಸಿದ್ದು, ವ್ಯಾಸಂಗಕ್ಕೆ ವಯಸ್ಸಿಲ್ಲ ಎಂದಿದ್ದಾರೆ.

    MORE
    GALLERIES

  • 58

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಮತ್ತೊಂದೆಡೆ, ಬರೇಲಿಯ ಬಿತ್ರಿ-ಚೈನ್‌ಪುರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರತೌಲ್ ಅವರು 55 ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜೇಶ್ ಈಗ ಕಾನೂನಿನಲ್ಲಿ (ಎಲ್‌ಎಲ್‌ಬಿ) ಪದವಿ ಪಡೆಯುವ ಯೋಚನೆಯಲ್ಲಿದ್ದಾರೆ.

    MORE
    GALLERIES

  • 68

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    2017 ರಿಂದ 2022 ರವರೆಗೆ ಬಿತ್ರಿ ಚೈನ್‌ಪುರ್‌ನಿಂದ ಬಿಜೆಪಿ ಶಾಸಕರಾಗಿದ್ದ ರಾಜೇಶ್, ಎರಡು ವರ್ಷಗಳ ಹಿಂದೆ ನಾನು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ಈಗ 12ನೇ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಿದ್ದೇನೆ. ಈಗ, ನಾನು ಎಲ್‌ಎಲ್‌ಬಿ ಮಾಡಲು ಬಯಸುತ್ತೇನೆ, ಇದರಿಂದ ನಾನು ಬಡವರಿಗೆ ನ್ಯಾಯ ದೊರೆಕಿಸಿಕೊಡಲು ಸಹಾಯ ಮಾಡಬಹುದು ಎಂದಿದ್ದಾರೆ.

    MORE
    GALLERIES

  • 78

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಅವರು 500ಕ್ಕೆ 263 ಅಂಕ ಗಳಿಸಿದ್ದ ರಾಜೇಶ್ ಮೂರು ವಿಷಯಗಳಲ್ಲಿ ಪಡೆದಿರುವ ಅಂಕಗಳಿಂದ ತೃಪ್ತಿಯಾಗಿಲ್ಲ ಎಂದಿದ್ದಾರೆ. ಡ್ರಾಯಿಂಗ್ ಡಿಸೈನ್, ಸಿವಿಕ್ಸ್ ಮತ್ತು ಶಿಕ್ಷಣ ವಿಷಯಗಳಲ್ಲಿ ಪಡೆದ ಅಂಕಗಳಿಂದ ನನಗೆ ತೃಪ್ತಿಯಿಲ್ಲ, ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವೆ ಎಂದಿದ್ದಾರೆ. ರಾಜೇಶ್ ಹಿಂದಿಯಲ್ಲಿ 57, ಸಿವಿಕ್ಸ್‌ನಲ್ಲಿ 47, ಶಿಕ್ಷಣದಲ್ಲಿ 42, ಡ್ರಾಯಿಂಗ್ ಡಿಸೈನ್‌ನಲ್ಲಿ 36 ಮತ್ತು ಸಮಾಜಶಾಸ್ತ್ರದಲ್ಲಿ 81 ಅಂಕ ಗಳಿಸಿದ್ದಾರೆ.

    MORE
    GALLERIES

  • 88

    MLAs Pass 12th Exam: 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 50 ದಾಟಿದ ಇಬ್ಬರು ಮಾಜಿ ಶಾಸಕರು! ಪಡೆದ ಅಂಕಗಳೆಷ್ಟು ನೋಡಿ

    ಎಲ್‌ಎಲ್‌ಬಿ ಸಿದ್ಧತೆಯ ಅಗತ್ಯತೆ ಕುರಿತು ಕೇಳಿದ್ದಕ್ಕೆ ಉತ್ತರಿಸಿದ ರಾಜೇಶ್, ನಾನು ಶಾಸಕನಾಗಿದ್ದಾಗ, ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದನ್ನು ನಾನು ಅರಿತುಕೊಂಡೆ, ಏಕೆಂದರೆ ಬಡ ಜನರು ಉತ್ತಮ ವಕೀಲರ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಅಂಥವರ ಪರ ನಾನು ವಕೀಲನಾಗಿ ನೆರವು ನೀಡುತ್ತೇನೆ ಎಂದಿದ್ದಾರೆ.

    MORE
    GALLERIES