ಟರ್ಕಿಯಲ್ಲಿ ಆಪರೇಷನ್ ದೋಸ್ತ್ ಕಾರ್ಯಚಾರಣೆಯಲ್ಲಿ ಭಾಗವಹಿಸಿದ್ದ ತಂಡವೊಂದು ಇಂದು ತವರಿಗೆ ಮರಳಿದೆ. ಇದು ಗಾಜಿಯಾಬಾದ್ ಎನ್‌ಡಿಆರ್‌ಎಫ್ ಬೆಟಾಲಿಯನ್‌ಗೆ ತಲುಪಿದ್ದು, ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯಲಿದ್ದಾರೆ. ಬಳಿಕ ಊಟ ಮುಗಿಸಿ ಮನೆಗೆ ತೆರಳುತ್ತಾರೆ. ಆದರೆ ಎರಡನೇ ತಂಡ ಇಂದು ಸಂಜೆ ಬರಲಿದ್ದು, ಮೂರನೇ ತಂಡ ನಾಳೆ ಬರಲಿದೆ ಎಂದು ತಿಳಿದುಬಂದಿದೆ.