ಏಪ್ರಿಲ್ ತಿಂಗಳ 300 ರೂಪಾಯಿ ಮೊತ್ತದ ಪ್ರತ್ಯೇಕ ಪ್ರವೇಶ ದರ್ಶನದ ಟಿಕೆಟ್ಗಳನ್ನು ಇದೇ ತಿಂಗಳ 27ರ ಬೆಳಗ್ಗೆ 11 ಗಂಟೆಗೆ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ ತಿಂಗಳಿನಲ್ಲಿ ತಿರುಮಲಕ್ಕೆ ಆಗಮಿಸಬೇಕು ಎಂದುಕೊಂಡಿರುವ ಭಕ್ತರು ಟಿಟಿಡಿ ಅಧಿಕೃತ ವೆಬ್ಸೈಟ್ ಹಾಗೂ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು ಎಂದು ಟಿಟಿಡಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)
ಇನ್ನು ಜೂನ್ ತಿಂಗಳಿಗೆ ಸಂಬಂಧಿಸಿದ ಅಂಗ ಪ್ರದಕ್ಷಿಣೆ ಟಿಕೆಟ್ಗಳನ್ನು ಟಿಟಿಡಿ ಬಿಡುಗಡೆ ಮಾಡಿದೆ. ಶುಕ್ರವಾರದಿಂದಲೇ ಈ ಟಿಕೆಟ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲ ನಿಮಿಷಗಳಲ್ಲೇ ಟಿಕೆಟ್ಗಳು ಮಾರಾಟವಾಗಿದೆ. ಈ ಟಿಕೆಟ್ ಹೊಂದಿರುವ ಭಕ್ತರಿಗೆ ಶ್ರೀವಾರಿ ದೇವಸ್ಥಾನದ ಸುತ್ತಲು ಅಂಗ ಪ್ರದಕ್ಷಿಣೆ ಮಾಡಲು ಅವಕಾಶ ಲಭ್ಯವಾಗಲಿದೆ. (ಸಾಂದರ್ಭಿಕ ಚಿತ್ರ)