TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

ತಿರುಮಲ ತಿಮ್ಮಪ್ಪನ ವಿಶೇಷ ಪ್ರವೇಶದ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಭಕ್ತರು ಟಿಕೆಟ್​ಗಳನ್ನು ಆನ್​ಲೈನ್ ಮೂಲಕ ಬುಕ್ ಮಾಡಬಹುದಾಗಿದೆ.

First published:

  • 18

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಕಲಿಯುಗದ ವೈಕುಂಠ ಎಂದೇ ಪ್ರಸಿದ್ಧವಾದ ತಿರುಮಲದ ಭಕ್ತರಿಗೆ ಮಹತ್ವದ ಮಾಹಿತಿಯೊಂದನ್ನು ಟಿಟಿಡಿ ನೀಡಿದೆ. ಏಪ್ರಿಲ್ ತಿಂಗಳ ವಿಶೇಷ ದರ್ಶನ ಟಿಕೆಟ್​ಗಳು ಇಂದು (ಮಾರ್ಚ್28) ಬಿಡುಗಡೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ವೆಂಕಟೇಶ ಸ್ವಾಮಿಯ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂತಹ ಎಲ್ಲಾ ಭಕ್ತರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಇಂದು ಟಿಟಿಡಿ ಏಪ್ರಿಲ್ ತಿಂಗಳ 300 ರೂಪಾಯಿ ವಿಶೇಷ ದರ್ಶನ ಟಿಕೆಟ್ ಬಿಡುಗಡೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ತಿರುಮಲ ತಿಮ್ಮಪ್ಪನ ವಿಶೇಷ ಪ್ರವೇಶದ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಭಕ್ತರು ಟಿಕೆಟ್​ಗಳನ್ನು ಆನ್​ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಬೆಳಗ್ಗೆ 11 ಗಂಟೆಯಿಂದಲೇ ತಿಮ್ಮಪ್ಪನ ದರ್ಶನಕ್ಕೆ 300 ರೂಪಾಯಿಯ ವಿಶೇಷ ಟಿಕೆಟ್​ಗಳು ಆನ್​ಲೈನ್​ನಲ್ಲಿ ಲಭ್ಯವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಭಕ್ತರು ದರ್ಶನ ಟಿಕೆಟ್​ಗಳನ್ನು ಕಾಯ್ದಿರಿಸಬೇಕಾಗಿ ಟಿಟಿಡಿ ಮನವಿ ಮಾಡಿದೆ. ಆದರೆ ತಿರುಮಲದ ಅಧಿಕೃತ ವೆಬ್​ಸೈಟ್​ನಲ್ಲಿ ಮಾತ್ರ ಈ ವಿಶೇಷ ಟಿಕೆಟ್​ಗಳನ್ನು ಬುಕ್ ಮಾಡಲು ವಿನಂತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಈ ಟಿಕೆಟ್ಗಳನ್ನು ರೈಲ್ವೆಯಲ್ಲಿ ತತ್ಕಾಲ್ ಟಿಕೆಟ್ ಕಾಯ್ದಿರಿಸುವಂತೆಯೇ ಬುಕ್ ಮಾಡಬಹುದಾಗಿದೆ. ಮೊದಲು https://ttdsevaonline.com ಸೈಟ್​ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಟಿಟಿಡಿ ನೀವು ಸೈಟ್​ನಲ್ಲಿ ಸೈನ್ ಅಪ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಅಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಲಾಗಿನ್ ಪುಟ ತೆರೆದುಕೊಳ್ಳುತ್ತದೆ. ಒಮ್ಮೆ ಲಾಗ್ ಇನ್ ಮಾಡಿದ ನಂತರ ಡ್ಯಾಶ್​ಬೋರ್ಡ್​ ತೆರೆಯುತ್ತದೆ. ಅಲ್ಲಿ ಯಾವ ದಿನಾಂಕಗಳಂದು ಟಿಕೆಟ್​ಗಳು ಲಭ್ಯವಿದೆ ಎಂಬ ಮಾಹಿತಿ ಕಾಣಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ

    ಅಲ್ಲಿ ನಾವು ನಮಗೆ ಬೇಕಾದ ದಿನಾಂಕ ಮತ್ತು ಸ್ಲಾಟ್ ಅನ್ನು ಪರಿಶೀಲಿಸಬೇಕು. ಆ ದಿನದಂದು ಟಿಕೆಟ್ ಬುಕ್ ಆಗದೇ ಖಾಲಿ ಇದ್ದರೆ ಹಸಿರು ಬಣ್ಣದಲ್ಲಿ ಎಷ್ಟು ಟಿಕೆಟ್​ಗಳು ಲಭ್ಯವಿವೆ ಎಂಬ ಮಾಹಿತಿ ಕಾಣಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES