Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

ಈವರೆಗೆ ತಿರುಮಲದಲ್ಲಿ ಲಡ್ಡು ಪ್ರಸಾದ, ಸರ್ವ ದರ್ಶನಂ ಟೋಕನ್ ವಿತರಣೆಯಿಂದ ಹಿಡಿದು ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವವರೆಗೂ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು. ಆದರೆ ಈ ಎಲ್ಲ ಅಕ್ರಮಗಳಿಗೆ ಮಂಗಳ ಹಾಡಲು ಟಿಟಿಡಿ ಆಧುನಿಕ ವ್ಯವಸ್ಥೆಯ ಮೊರೆ ಹೋಗಿದೆ. 

  • Local18
  • |
  •   | Andhra Pradesh, India
First published:

  • 19

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ತಿರುಮಲ ತಿಮ್ಮಪ್ಪನ ಭಕ್ತಾದಿಗಳೇ, ನಿಮಗೊಂದು ಸಂತಸದ ಸುದ್ದಿ ಇಲ್ಲಿದೆ. ಭಕ್ತರ ಅನುಕೂಲಕ್ಕೆ ಎಂದೇ ಟಿಟಿಡಿ ಹೊಸ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಮಾರ್ಚ್ 1 ರಿಂದ ಪ್ರಾಯೋಗಿಕವಾಗಿ ತಿರುಮಲದಲ್ಲಿಅತ್ಯಾಧುನಿಕ ಫೇಸ್ ರೆಕಗ್ನೈಸೇಷನ್ ಯೋಜನೆ ಜಾರಿಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಈವರೆಗೆ ತಿರುಮಲದಲ್ಲಿ ಲಡ್ಡು ಪ್ರಸಾದ, ಸರ್ವ ದರ್ಶನಂ ಟೋಕನ್ ವಿತರಣೆಯಿಂದ ಹಿಡಿದು ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವವರೆಗೂ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು. ಆದರೆ ಈ ಎಲ್ಲ ಅಕ್ರಮಗಳಿಗೆ ಮಂಗಳ ಹಾಡಲು ಟಿಟಿಡಿ ಆಧುನಿಕ ವ್ಯವಸ್ಥೆಯ ಮೊರೆ ಹೋಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಸದ್ಯ ತಿರುಮಲದಲ್ಲಿ ಸುಮಾರು 7,000 ವಸತಿಗೃಹಗಳಿವೆ. ಅವುಗಳಲ್ಲಿ ಸುಮಾರು 5,000 ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ಉಳಿದ 1,000 ರೂಮ್​ಗಳನ್ನು ವಿಐಪಿ ಭಕ್ತರಿಗೆ ಮೀಸಲಿಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಇನ್ನುಳಿದ  1,000 ಕೊಠಡಿಗಳಲ್ಲಿ ನಿರ್ವಹಣೆ ಮತ್ತು ನವೀಕರಣ ಕಾರ್ಯಗಳು ನಿಯಮಿತವಾಗಿ ನಡೆಯುತ್ತಲೇ ಇರುತ್ತವೆ. ಬೆಟ್ಟದ ದೇಗುಲದ ಮೇಲಿನ ವಸತಿ ಸಂಕೀರ್ಣಗಳು 5,000 ರಿಂದ 10,000 ಭಕ್ತರಿಗೆ ವಸತಿ ಒದಗಿಸುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಆದರೆ ಸಾಮಾನ್ಯ ಭಕ್ತರು ರೂಮ್ ಪಡೆಯುವಲ್ಲಿ ಮೋಸ ಹೋಗುವುದೇ ಹೆಚ್ಚು. ಮಧ್ಯವರ್ತಿಗಳು ತಿರುಪತಿಗೆ ಆಗಮಿಸುವ ಭಕ್ತರಿಗೆ ರೂಮ್ ವಿಷಯಕ್ಕೆ ಪಂಗನಾಮ ಹಾಕುವುದನ್ನು ತಡೆಯಲು ಟಿಟಿಡಿ ಡಿಜಿಟಲ್ ಪಾವತಿ, ಒಟಿಪಿ ಮತ್ತು ಫೇಸ್ ರೆಕಗ್ನೈಸೇಷನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಟಿಟಿಡಿಯು ಈ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಹೊರಟಿದೆ. ಭಕ್ತರು ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಬಳಸಿಕೊಂಡು ನೇರವಾಗಿ ಪಾವತಿ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಈ ಹೊಸ ವ್ಯವಸ್ಥೆಯ ಅಡಿ ಭಕ್ತರು ರೂಮ್​ಗೆ ಚೆಕ್ ಇನ್ ಮಾಡಿದಾಗ TTD ಯಿಂದ OTP ಸ್ವೀಕರಿಸುತ್ತಾರೆ. ರೂಮ್ ಖಾಲಿ ಮಾಡುವಾಗ OTP ತಿಳಿಸಿ ಮುಂಗಡ ಪಾವತಿ ಮಾಡಿದ ಹಣವನ್ನು ಹಿಂಪಡೆಯಬಹುದಾಗಿದೆ. ಇದರಿಂದ ದಲ್ಲಾಳಿಗಳು ಭಕ್ತರು ಪಾವತಿಸುತ್ತಿದ್ದ ಮುಂಗಡ ಹಣ ಗುಳುಂ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Tirupati Tirumala: ಸಂತಸದ ಸುದ್ದಿ ನೀಡಿದ ತಿರುಮಲ ತಿಮ್ಮಪ್ಪ! ಎಲ್ಲಾ ಅಕ್ರಮಗಳಿಗೆ ಬ್ರೇಕ್!

    ಅಲ್ಲದೇ, ಟಿಟಿಡಿ ಮಾರ್ಚ್ 1ರಿಂದ 1 ವಾರಗಳ ಕಾಲ ಫೇಸ್ ರೆಕಗ್ನೈಸೇಷನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಹೊರಟಿದೆ. ಇದರಿಂದ ದಲ್ಲಾಳಿಗಳು ಭಕ್ತರಿಗೆ ಮೋಸ ಮಾಡುವುದು ಸಂಪೂರ್ಣ ನಿಲ್ಲಲಿದೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES