ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರರು ಮಂದಿ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆದ ಬಳಿಕ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಹಣವನ್ನು ಹುಂಡಿಗೆ ಹಾಕುತ್ತಾರೆ. ಮತ್ತೆ ಕೆಲವು ಭಕ್ತರು ಲಕ್ಷ, ಕೋಟಿ ಮೊತ್ತದಲ್ಲಿ ಟಿಟಿಡಿಗೆ ದೇಣಿಗೆಯನ್ನು ನೀಡುತ್ತಾರೆ. ಕೇವಲ ಹುಂಡಿಯಲ್ಲೇ ಪ್ರತಿ ದಿನ 3-4 ಕೋಟಿ ರೂಪಾಯಿ ಆದಾಯವಿದೆ. (ಸಾಂದರ್ಭಿಕ ಚಿತ್ರ)
ತಿರುಮಲ ಭಕ್ತರಿಗೆ ಒಂದು ದಿನ ಅನ್ನದಾಸೋಹ ನೀಡಲು ಸುಮಾರು 33 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಇಷ್ಟು ಮೊತ್ತವನ್ನು ನೀವು ತಿರುಮಲ ತಿರುಪತಿ ದೇವಸ್ಥಾನ ಸಮಿತಿಗೆ ದೇಣಿಗೆ ನೀಡಿದರೆ ಸಮಿತಿ ಅನ್ನದಾಸೋಹವನ್ನು ನಿಮ್ಮ ಹೆಸರಿನಲ್ಲಿ ನೀಡುತ್ತದೆ. ಅನ್ನದಾಸೋಹ ನೀಡುವ ಸಂದರ್ಭದಲ್ಲಿ ಟಿಟಿಡಿಗೆ ದೇಣಿಗೆ ನೀಡಿದ ಭಕ್ತರ ಹೆಸರನ್ನು ಡಿಸ್ಪ್ಲೇ ಬೋರ್ಡ್ ಮೂಲಕ ಪ್ರದರ್ಶನ ಮಾಡಲಾಗುತ್ತದೆ. (ಸಾಂದರ್ಭಿಕ ಚಿತ್ರ)