Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

ತಿರುಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪಾರ್ಟ್‌ಮೆಂಟ್‌ಗಳು ತುಂಬಿವೆ. ಪರಿಣಾಮ ಟಿಟಿಡಿ ಭಕ್ತರಿಗೆ ತಮ್ಮ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದೆ.

First published:

  • 17

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ತಿರುಮಲ ದೇವಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಮೂರು ದಿನಗಳ ರಜೆ ಇದ್ದ ಕಾರಣ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ತಿರುಪತಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪಾರ್ಟ್‌ಮೆಂಟ್‌ಗಳು ತುಂಬಿವೆ. ಪರಿಣಾಮ ಟಿಟಿಡಿ ಭಕ್ತರಿಗೆ ತಮ್ಮ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸುಮಾರು 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ. ಇಂದು ಸಂಜೆಯೊಳಗೆ ಭಕ್ತರ ಸಂಖ್ಯೆ ಕಡಿಮೆಯಾಗದಿದ್ದರೆ, ನಾಳೆ ಬೆಳಗ್ಗೆಯವರೆಗೆ ಕ್ಯೂ ಲೈನ್‌ಗಳಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲು ಟಿಟಿಡಿ ಮುಂದಾಗಿದೆ. ಈ ಸಂಬಂಧ ಸಿಬ್ಬಂದಿಗೆ ಟಿಟಿಡಿ ಇಒ ಧರ್ಮಾರೆಡ್ಡಿ ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ಕೌಂಟರ್​​ಗಳಲ್ಲಿ ಇರುವ ಭಕ್ತರಿಗೆ ಅಗತ್ಯವಿರುವ ಕುಡಿಯುವ ನೀರು, ಅನ್ನದಾಸೋಹವನ್ನು ಪೂರೈಸಲಾಗುತ್ತಿದೆ. ಸರ್ವದರ್ಶನದ ಟಿಕೆಟ್​ ಇಲ್ಲದೆ ಬರುವ ಭಕ್ತರಿಂದ ವೈಕುಂಠ ಕ್ಯೂ ಕಾಂಪ್ಲೇಕ್ಸ್​-2ರಲ್ಲಿ ಕಂಪಾರ್ಟ್​ಮೆಂಟ್, ನಾರಾಯಣಗಿರಿ ಶೇಡ್​​ಗಳು ತುಂಬಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 30 ಕಂಪಾರ್ಟ್​ಮೆಂಟ್​​ಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಇದರೊಂದಿಗೆ ಭಕ್ತರ ಕ್ಯೂ ಗೋಗರ್ಭಂ ಜಲಾಶಯದ ವರೆಗೂ ಬಂದು ನಿಂತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ಉಳಿದಂತೆ ಮಾರ್ಚ್​ ತಿಂಗಳಿನಲ್ಲಿ 20.57 ಲಕ್ಷ ಭಕ್ತರು ದೇವರ ದರ್ಶನ ಪಡೆದುಕೊಂಡಿದ್ದಾರೆ. ಪರಿಣಾಮ ಮಾರ್ಚ್​ ತಿಂಗಳ ಹುಂಡಿ ಆದಾಯ ದಾಖಲೆ ಬರೆದಿದೆ. ಹುಂಡಿಯಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tirumala: ಸಾಲು ಸಾಲು ರಜೆ, ತಿರುಮಲದಲ್ಲಿ ಹೆಚ್ಚಾಯ್ತು ಭಕ್ತರ ಸಂಖ್ಯೆ! ತಿರುಪತಿಗೆ ಹೋಗೋ ಮುನ್ನ ನೀವು ಈ ಸುದ್ದಿ ಓದಲೇಬೇಕು

    ಉಳಿದಂತೆ ಒಂದು ಕೋಟಿ ಎರಡು ಲಕ್ಷ ಭಕ್ತರಿಗೆ ಲಡ್ಡು ನೀಡಲಾಗಿದೆ. 38.17 ಲಕ್ಷ ಭಕ್ತರಿಗೆ ಅನ್ನದಾಸೋಹ ನೀಡಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES