ಶ್ರೀಲಂಕಾದಲ್ಲಿ 63 ವರ್ಷದ ಟ್ರಕ್ ಚಾಲಕರೊಬ್ಬರು ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸಾವನ್ನಪ್ಪಿದ್ದಾರೆ. ಇಂಧನ ತುಂಬಿಸಲು ದೀರ್ಘಕಾಲ ಕಾಯುತ್ತಿದ್ದ ಕಾರಣ 10 ನೇ ಸಾವು ವರದಿಯಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರವು ತನ್ನ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಅಂಗುರುವಾತೋಟದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸರತಿ ಸಾಲಿನಲ್ಲಿ ನಿಂತ ನಂತರ ವ್ಯಕ್ತಿ ತನ್ನ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸರತಿ ಸಾಲಿನಲ್ಲಿ ಸತ್ತವರ ಸಂಖ್ಯೆ ಈಗ 10 ರಷ್ಟಿದೆ. ಮೃತಪಟ್ಟವರೆಲ್ಲ 43 ರಿಂದ 84 ವರ್ಷ ವಯಸ್ಸಿನ ಪುರುಷರು. ಸರತಿ ಸಾಲಿನಲ್ಲಿ ವರದಿಯಾದ ಹೆಚ್ಚಿನ ಸಾವುಗಳು ಹೃದಯಾಘಾತದಿಂದ ಸಂಭವಿಸಿವೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.