Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

ನವದೆಹಲಿ: ತನ್ನ ಭವಿಷ್ಯದ ಅನಿಶ್ಚಿತತೆಯ ಮಧ್ಯೆ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಶುಕ್ರವಾರ ತನ್ನ ಎಲ್ಲಾ ವಿಮಾನಗಳ ರದ್ದತಿಯನ್ನು ಮೇ 12 ರವರೆಗೆ ವಿಸ್ತರಿಸಿದೆ.

First published:

 • 17

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ವಾಡಿಯಾ ಗ್ರೂಪ್-ಮಾಲೀಕತ್ವದ ಗೋಫಸ್ಟ್‌ ಏರ್‌ಲೈನ್ಸ್‌ ಅನ್ನು ಈ ಹಿಂದೆ ಗೋ ಏರ್ ಎಂದು ಕರೆಯಲಾಗುತ್ತಿತ್ತು, ಬಳಿಕ ವಿಮಾನದಲ್ಲಿ ಕೆಲವೊಂದು ಹೊಸತನದ ಬದಲಾವಣೆಯ ಜೊತೆಗೆ ಗೋ ಫಸ್ಟ್‌ ಅಂತಾನೂ ಹೆಸರನ್ನು ಬದಲಾಯಿಸಿತ್ತು.

  MORE
  GALLERIES

 • 27

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ಕಳೆದ ವಾರ ಹಣಕಾಸು ಬಿಕ್ಕಟ್ಟಿನ ಕಾರಣಕ್ಕಾಗಿ ಮೇ 3, 4 ಮತ್ತು 5ರಂದು ಒಟ್ಟು ಮೂರು ದಿನಗಳ ಕಾಲ ತನ್ನ ಎಲ್ಲಾ ವಿಮಾನ ಹಾರಾಟಗಳನ್ನು ರದ್ಡುಗೊಳಿಸುವುದಾಗಿ ಘೋಷಣೆ ಮಾಡಿತ್ತು.

  MORE
  GALLERIES

 • 37

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ಇದೀಗ ತನ್ನ ಪ್ರಕರಣದ ಆದೇಶವನ್ನು ಕಾಯ್ದಿರಿಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ವಾಡಿಯಾ ಸಮೂಹ ಮನವಿ ಸಲ್ಲಿಸಿದೆ.

  MORE
  GALLERIES

 • 47

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಉಲ್ಬಣಗೊಂಡಿರುವ ಏರ್‌ಲೈನ್‌ನ ಸಾಲ ಮತ್ತು ಹೊಣೆಗಾರಿಕೆಗಳನ್ನು ಪುನರ್ರಚಿಸುವ ಗುರಿಯನ್ನು ಈ ಮನವಿಯು ಹೊಂದಿದೆ.

  MORE
  GALLERIES

 • 57

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ವಿಮಾನಯಾನ ಸಂಸ್ಥೆಗಳ ಜೊತೆ ತೀವ್ರ ತರನಾದ ಸ್ಪರ್ಧೆ ಮತ್ತು ಟಾಟಾ ಕಂಪನಿ ಜೊತೆ ಏರ್ ಇಂಡಿಯಾ ಮತ್ತು ವಿಸ್ತಾರಾ ವಿಮಾನ ಸಮೂಹವನ್ನು ಖಾಸಗೀಕರಣಗೊಳಿಸಿದ್ದು ಕೂಡ ಗೋ ಫಸ್ಟ್‌ ಕಂಪನಿ ದಿವಾಳಿಯಾಗಲು ಕಾರಣ ಎನ್ನಲಾಗಿದೆ.

  MORE
  GALLERIES

 • 67

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ರದ್ದಾದ ವಿಮಾನಗಳ ಟಿಕೆಟ್‌ ಹಣವನ್ನು ಗ್ರಾಹಕರಿಗೆ ಸಂಪೂರ್ಣ ಮರುಪಾವತಿ ಮಾಡುವುದಾಗಿ ಗೋ ಫಸ್ಟ್‌ ಏರ್‌ಲೈನ್ ಟ್ವೀಟ್‌ನಲ್ಲಿ ತಿಳಿಸಿದೆ. ಅಲ್ಲದೇ ತನ್ನ ವೆಬ್‌ಸೈಟ್‌ನಲ್ಲೂ ಹೇಳಿತ್ತು.

  MORE
  GALLERIES

 • 77

  Go First Airlines: ದಿವಾಳಿಯತ್ತ ಗೋ ಫಸ್ಟ್‌ ಏರ್‌ಲೈನ್ಸ್‌; ಎಲ್ಲಾ ವಿಮಾನಗಳ ರದ್ದತಿ ಮೇ 12ರವರೆಗೆ ವಿಸ್ತರಣೆ!

  ಹಣಕಾಸಿನ ತೀವ್ರ ಬಿಕ್ಕಟ್ಟಿನ ಸಮಸ್ಯೆಯಿಂದ ವಿಮಾನಯಾನ ಸಂಸ್ಥೆ ಈ ನಿರ್ಧಾರ ಕೈಗೊಂಡಿದ್ದು, ನಮಗೆ ಹಣಕಾಸಿನ ಹೊಣೆಗಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರಾ‍ಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಸಂಸ್ಥೆ ಹೇಳಿದೆ.

  MORE
  GALLERIES