Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇನ್ನೇನು ಕೆಲವೇ ಘಂಟೆಗಳಲ್ಲಿ ಮೂರೂ ರಾಜ್ಯಗಳ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಮೇಘಾಲಯದಲ್ಲಿ ಆಡಳಿತಾರೂಢ ನ್ಯಾಷನಲ್‌ ಪೀಪಲ್ಸ್ ಪಾರ್ಟಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣಾ ಫಲಿತಾಂಶ ಕುರಿತಾದ ಹೈಲೈಟ್ಸ್‌ ಇಲ್ಲಿದೆ.

First published:

  • 17

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಪ್ರತಿಸ್ಪರ್ಧಿ ಎಡಪಕ್ಷ ಮತ್ತು ಕಾಂಗ್ರೆಸ್‌ ಮೈತ್ರಿಗಿಂತ ಮುನ್ನಡೆ ಕಾಯ್ದುಕೊಂಡಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಒಟ್ಟು 60 ಕ್ಷೇತ್ರಗಳ ಪೈಕಿ ಬಿಜೆಪಿ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

    MORE
    GALLERIES

  • 27

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ಚುನಾವಣಾ ಫಲಿತಾಂಶದ ಬಗ್ಗೆ ನಿನ್ನೆಯೇ ಭವಿಷ್ಯ ನುಡಿದಿದ್ದ ಅಸ್ಸಾಂ ಮುಖ್ಯಮಂತ್ರಿ ಮತ್ತು ಈಶಾನ್ಯ ಬಿಜೆಪಿಯ ಮುಖ್ಯ ಉಸ್ತುವಾರಿ ಹಿಮಂತ್‌ ಬಿಸ್ವಾ ಶರ್ಮಾ, ತ್ರಿಪುರಾದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಆಗಲಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ, ಮೇಘಾಲಯದಲ್ಲಿ ಬಿಜೆಪಿ ಕಿಂಗ್‌ ಮೇಕರ್ ಆಗಲಿದೆ ಎಂದು ಹೇಳಿದ್ದರು.

    MORE
    GALLERIES

  • 37

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ತ್ರಿಪುರಾದಲ್ಲಿ ಬಿಜೆಪಿ 34 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎಡಪಕ್ಷ 15 ಮತ್ತು ಮಾಜಿ ರಾಜ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗ್ರೇಟರ್ ಟಿಪ್ರಾಲ್ಯಾಂಡ್‌ಗಾಗಿ ಒತ್ತಾಯಿಸುತ್ತಿರುವ ಬುಡಕಟ್ಟು ಪ್ರಾಬಲ್ಯದ ಪಕ್ಷವನ್ನು ಈ ಚುನಾವಣೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ.

    MORE
    GALLERIES

  • 47

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ಮೇಘಾಲಯವು ಹಂಗ್ ಅಸೆಂಬ್ಲಿಯತ್ತ ಸಾಗುತ್ತಿರುವಂತೆ ತೋರುತ್ತಿದೆ, ಯಾವುದೇ ಪಕ್ಷಕ್ಕೆ ಇನ್ನೂ ಸ್ಪಷ್ಟ ಬಹುಮತವಿಲ್ಲ. ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಥವಾ ಎನ್‌ಪಿಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಬಹುಮತಕ್ಕೆ ಐದು ಕಡಿಮೆ.

    MORE
    GALLERIES

  • 57

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ಸದ್ಯದ ಪರಿಸ್ಥಿತಿಯ ಪ್ರಕಾರ ಮೇಘಾಲಯದಲ್ಲಿ ಇನ್ನೂ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಆದರೆ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಪಕ್ಷ 25 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಬಹುಮತಕ್ಕೆ 5 ಸ್ಥಾನಗಳ ಕೊರತೆ ಅನುಭವಿಸಿದೆ. ಕಾಂಗ್ರೆಸ್ 4, ಬಿಜೆಪಿ ಮತ್ತು ಟಿಎಂಸಿ ತಲಾ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದ ಇಪ್ಪತ್ತು ಸ್ಥಾನಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ.

    MORE
    GALLERIES

  • 67

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ಇನ್ನು ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಪಕ್ಷ 40 ಸ್ಥಾನಗಳಲ್ಲಿ, ಎನ್‌ಪಿಎಫ್‌ 3 ಮತ್ತು ಇತರರು 17 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಯಾವುದೇ ಖಾತೆ ತೆರೆದಿಲ್ಲ.

    MORE
    GALLERIES

  • 77

    Tripura, Nagaland, Meghalaya Assembly Election Results 2023: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮುನ್ನಡೆ, ಮೇಘಾಲಯದಲ್ಲಿ ಹಾವು ಏಣಿಯಾಟ!

    ಈ ವರ್ಷದಲ್ಲಿ ನಡೆಯುವ ಈ ಚುನಾವಣಾ ಫಲಿತಾಂಶವು ಮುಂದಿನ ದಿನಗಳಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.

    MORE
    GALLERIES