ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಅಯೋಧ್ಯೆಯಲ್ಲಿ ಭಕ್ತರಿಗೆ ದೊರಕಬೇಕಾದ ಮೂಲಸೌಕರ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ದೇವಸ್ಥಾನ ಸಿದ್ಧವಾಗುತ್ತಿದ್ದಂತೆ ಅಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಭಕ್ತರು ಬೇರೆ ರಾಜ್ಯದಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಉಳಿದುಕೊಳ್ಳಲು ಅತ್ಯುತ್ತಮವಾದ ಹೋಟೆಲ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ತಾರಾ ಜಿ ರೆಸಾರ್ಟ್ (Tara Ji Resort): ಅಯೋಧ್ಯೆಗೆ ಶ್ರೀರಾಮನ ದರ್ಶನಕ್ಕೆ ಬರುವವರಿಗೆ ಅಯೋಧ್ಯೆ-ಫೈಜಾಬಾದ್ ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾರಾ ಜಿ ರೆಸಾರ್ಟ್‌ಗೆ ಉಳಿದುಕೊಳ್ಳಲು ಅದ್ಭುತ ಆಯ್ಕೆಯಾಗಿದೆ. ನೀವು ಇಲ್ಲಿ ಉಳಿಯಲು ಬಯಸಿದರೆ ವಿವಿಧ ಸೌಕರ್ಯಗಳನ್ನು ಹೊಂದಿರುವ ಕೊಠಡಿಗಳಿಗೆ 2600, 2800 ಮತ್ತು 6500 ರೂಪಾಯಿಯವರೆಗೆ ಸಿಗುತ್ತವೆ. ಹೋಟೆಲ್ ಒಟ್ಟು 38 ಕೊಠಡಿಗಳನ್ನು ಹೊಂದಿದೆ. ಹೋಟೆಲ್ನಲ್ಲೇ ಊಟದ ಸೌಲಭ್ಯವನ್ನು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಸಂಖ್ಯೆ 7311160000 ಗೆ ಕರೆ ಮಾಡಬಹುದು.
ಕೃಷ್ಣಾ ಪ್ಯಾಲೇಸ್ (Krishna Palace): ನೀವು ಸಹದ್ಗಂಜ್ ಬೈಪಾಸ್‌ನಿಂದ ಫೈಜಾಬಾದ್ ಮೂಲಕ ಅಯೋಧ್ಯಾ ಧಾಮದ ಕಡೆಗೆ ಹೊರಟಾಗ ಕೃಷ್ಣ ಪ್ಯಾಲೇಸ್ ಹೋಟೆಲ್ ಕಾಣಬಹುದು. ಫೈಜಾಬಾದ್‌ನಲ್ಲಿರುವ ಸಿವಿಲ್ ಲೈನ್ ಅನ್ನು ಚೌರಸ್ತಾ ಎಂದು ಕರೆಯಲಾಗುತ್ತದೆ. ಇಲ್ಲಿ 91 ಕೊಠಡಿಗಳಿವೆ. 3,000 ರಿಂದ 7,450 (ಜೊತೆಗೆ GST) ವರೆಗೆ ಕೊಠಡಿಗಳು ಲಭ್ಯವಿದೆ. ವಸತಿ ಜೊತೆಗೆ ಊಟ, ಟಿಫಿನ್ ಕೂಡ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ 05278221367 ಗೆ ಕರೆ ಮಾಡಿ.