Anant Ambani-Radhika Merchant: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ; ನಾಳೆ ಅದ್ಧೂರಿ ಗೋಲ್ ಧನ ಸಮಾರಂಭ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಮನೆ ಮಾಡಿದೆ. ಅದ್ಧೂರಿಯಾಗಿ ಮೆಹಂದಿ ಶಾಸ್ತ್ರ ನಡೆದಿದ್ದು, ನಾಳೆ ಗೋಲ್ ಧನ ಸಮಾರಂಭ ಕೂಡ ನಡೆಯಲಿದೆ.
ಮುಕೇಶ್ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಹೆಂದಿ ಶಾಸ್ತ್ರದ ಫೋಟೋ, ವಿಡಿಯೋದಲ್ಲಿ ವಧು-ವರರು ಮಿಂಚುತ್ತಿದ್ದಾರೆ. ಜನವರಿ 19ರ ಗುರುವಾರ ಸಂಜೆ ಅದ್ಧೂರಿ ಗೋಲ್ ಧನ ಸಮಾರಂಭ ನಡೆಯಲಿದೆ .
2/ 9
ಗೋಲ್ ಧನ ಎಂಬುದು ಗುಜರಾತಿನ ಸಾಂಪ್ರದಾಯಿಕ ನಿಶ್ಚಿತಾರ್ಥ ಸಮಾರಂಭವಾಗಿದೆ. ಈ ಸಮಾರಂಭದಲ್ಲಿ ಎರಡೂ ಫ್ಯಾಮಿಲಿಯ ಬಂಧು-ಮಿತ್ರರು ಭಾಗಿಯಾಗಲಿದ್ದಾರೆ.
3/ 9
ಗುಜರಾತಿ ಸಂಪ್ರದಾಯದಂತೆ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ ನಡೆಯಲಿದೆ. ಗೋಲ್ ಧನ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರಿಕೆ ಕೂಡ ನೀಡಲಾಗಿದೆ.
4/ 9
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ಇದೇ ತಿಂಗಳು ಹಸೆಮಣೆ ಏರಲಿದ್ದಾರೆ.
5/ 9
ಮೆಹಂದಿ ಶಾಸ್ತ್ರದಲ್ಲಿ ರಾಧಿಕಾ ಮರ್ಚೆಂಟ್ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಸೂತಿ ಹೂವಿನ ಬೂಟಿಗಳು ಮತ್ತು ಸಣ್ಣ ಕನ್ನಡಿಗಳೊಂದಿಗೆ, ಬಹು-ಬಣ್ಣದ ರೇಷ್ಮೆ ಬಟ್ಟೆಗಳಿಂದ ಈ ಲೆಹೆಂಗಾವನನ್ನು ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದಾರೆ.
6/ 9
ಮೆಹಂದಿ ಕಾರ್ಯಕ್ರಮದಲ್ಲಿ ವಧು-ವರರ ಡ್ಯಾನ್ಸ್ ಎಲ್ಲರ ಗಮನಸೆಳೆದಿದೆ. ಕಲಾಂಕ್ ಚಿತ್ರದ 'ಘರ್ ಮೋರ್ ಪರ್ದೇಸಿಯಾ' ಹಾಡಿಗೆ ರಾಧಿಕಾ ಮರ್ಚೆಂಟ್ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
7/ 9
ರಾಧಿಕಾ ಮರ್ಚೆಂಟ್, ಎನ್ಕೋರ್ ಹೆಲ್ತ್ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ವಯಸ್ಸು 28 ವರ್ಷ. ಭರತನಾಟ್ಯ ಡ್ಯಾನ್ಸರ್. ತಂಗಿಯ ಹೆಸರು ಅಂಜಲಿ ಮರ್ಚೆಂಟ್.
8/ 9
ಅನಂತ್ ಅಂಬಾನಿಮತ್ತು ರಾಧಿಕಾ ಮರ್ಚೆಂಟ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅನಂತ್ ಮತ್ತು ರಾಧಿಕಾ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. 2018ರಲ್ಲಿ ಅನಂತ್ ಮತ್ತು ರಾಧಿಕಾ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡುತ್ತಿರುವ ಫೋಟೋ ವೈರಲ್ ಆಗಿದೆ.
9/ 9
ರಾಧಿಕಾ ಎಷ್ಟೇ ಐಷಾರಾಮಿ ಜೀವನ ಹೊಂದಿದ್ದರೂ ಸಹ ತುಂಬಾ ಸಿಂಪಲ್ ಆಗಿರ್ತಾರೆ. ಸರಳ ಜೀವನ ನಡೆಸುತ್ತಾರೆ. ಹೆಚ್ಚು ಮೇಕಪ್ ಇಲ್ಲದೇ, ಆಭರಣವಿಲ್ಲದೇ, ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ.