Tomato Festival: ಈ ದೇಶದಲ್ಲಿ ಟೊಮ್ಯಾಟೋ ಹಿಡಿದು ಹೊಡೆದಾಡ್ತಾರೆ, ಹಬ್ಬವನ್ನೂ ಮಾಡ್ತಾರೆ...

ಭಾರತದಲ್ಲಿ ಪ್ರತೀವರ್ಷ ಹೋಳಿ ಹಬ್ಬದಲ್ಲಿ ಬಣ್ಣದೋಕುಳಿ ಆಡುವಂತೆ ಸ್ಪೇನ್​ನಲ್ಲಿ ಟೊಮ್ಯಾಟೋ ಫೆಸ್ಟಿವಲ್ ಆಚರಿಸಲಾಗುತ್ತದೆ. ಸ್ಪೇನ್​ನಲ್ಲಿ ಟೊಮ್ಯಾಟೋ ಫೆಸ್ಟಿವಲ್ ಎಂದರೆ ಜನರಿಗೆ ಎಲ್ಲಿಲ್ಲದ ಕ್ರೇಜ್. ಟನ್​ಗಟ್ಟಲೆ ಟೊಮ್ಯಾಟೋ ಹಣ್ಣು ತಂದು ಒಬ್ಬರಿಗೊಬ್ಬರು ಹೊಡೆದುಕೊಳ್ಳುವ ಮೂಲಕ ಬೀದಿ-ಬೀದಿಗಳಲ್ಲಿ ಎಂಜಾಯ್ ಮಾಡುತ್ತಾರೆ. ನಿನ್ನೆ ಸ್ಪೇನ್​ನ ಪೂರ್ವಭಾಗದಲ್ಲಿ ಈ ಹಬ್ಬ ಆಚರಿಸಲಾಗಿದ್ದು, 145 ಟನ್ ಟೊಮ್ಯಾಟೋ ಹಣ್ಣುಗಳನ್ನು ತಂದು ಪರಸ್ಪರ ಎಸೆದುಕೊಂಡು ಮಜಾ ಮಾಡಿದ್ದಾರೆ. ಬಿಳಿ ಬಟ್ಟೆಗಳನ್ನು ಹಾಕಿಕೊಂಡು ಎಳೆಯ ಮಕ್ಕಳಿಂದ ಹಿಡಿದು ಮುದುಕರವರೆಗೂ ಟೊಮ್ಯಾಟೋ ಹಬ್ಬದಲ್ಲಿ ಪಾಲ್ಗೊಂಡರು. ಟೊಮ್ಯಾಟೋ ಹಣ್ಣಿನಲ್ಲಿ ಮುಳುಗಿದ್ದವರಿಗೆ ದೊಡ್ಡ ಟ್ಯಾಂಕರ್ ಮೂಲಕ ನೀರು ಹಾಯಿಸಲಾಯಿತು.

First published: