Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

ಭೋಪಾಲ್: ಬಡಮಕ್ಕಳ ಸಾಮೂಹಿಕ ವಿವಾಹ ಯೋಜನೆಗಾಗಿ ವಧುಗಳ ಗರ್ಭದಾರಣೆ ಪರೀಕ್ಷೆ ಮಾಡಿಸಿರುವ ಮಧ್ಯಪ್ರದೇಶ ಸರ್ಕಾರದ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

First published:

  • 17

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಮಧ್ಯಪ್ರದೇಶ ಸರ್ಕಾರದ 'ಮುಖ್ಯಮಂತ್ರಿ ಕನ್ಯಾ ವಿವಾಹ' ಯೋಜನೆಯಡಿಯಲ್ಲಿ ವಿವಾಹವಾಗಲು ಆಯ್ಕೆಯಾದ ವಧುಗಳಿಗೆ ಮದುವೆಗೆ ಮುಂಚೆ ಗರ್ಭಧಾರಣೆ ಪರೀಕ್ಷೆ ನಡೆಸಿರೋದು ವಿವಾದಕ್ಕೆ ಗುರಿಯಾಗಿದೆ.

    MORE
    GALLERIES

  • 27

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ 220 ಬಾಲಕಿಯರ ಸಾಮೂಹಿಕ ವಿವಾಹವನ್ನು ಶನಿವಾರ ದಿಂಡೋರಿ ಜಿಲ್ಲೆಯ ಗಡ್ಸರಾಯ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು.

    MORE
    GALLERIES

  • 37

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಈ ವೇಳೆ ಗರ್ಭಧಾರಣೆ ಪರೀಕ್ಷೆ ಅಂಗವಾಗಿ ಮೂತ್ರ ಪರೀಕ್ಷೆಯ ಫಲಿತಾಂಶದ ಪ್ರಕಾರ ಐದು ಹೆಣ್ಣುಮಕ್ಕಳು ಗರ್ಭಿಣಿಯಾಗಿರುವುದರಿಂದ ಅವರ ವಿವಾಹವನ್ನು ನೆರವೇರಿಸಲಾಗಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES

  • 47

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ವಿಶೇಷವೆಂದರೆ ಕನ್ಯಾ ವಿವಾಹ ಯೋಜನೆಯಲ್ಲಿ ಮದುವೆಯಾಗಲು ಬಂದಿದ್ದ ನಾಲ್ವರು ಯುವತಿಯರು ಗರ್ಭಿಣಿಯರಾಗಿದ್ದಾರೆ ಅನ್ನೋದು ಕೂಡ ತಿಳಿದು ಬಂದಿದೆ.

    MORE
    GALLERIES

  • 57

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಸದ್ಯ ವಿವಾಹ ವಂಚಿತ ಯುವತಿಯರು ಆಯೋಜಕರ ವಿರುದ್ಧ ತಿರುಗಿಬಿದ್ದಿದ್ದು, ‘ನಾನು ಮದುವೆಗೆ ಎಲ್ಲ ರೀತಿಯ ತಯಾರಿ ನಡೆಸಿದ್ದೆ. ಆದರೆ, ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ನಾನು ಮದುವೆಯಾಗುವ ವ್ಯಕ್ತಿಯೊಡನೆ ವಾಸಿಸುತ್ತಿದ್ದೇನೆ. ವೈದ್ಯಕೀಯ ಪರೀಕ್ಷೆ ವೇಳೆ ನಾನು ಗರ್ಭಿಣಿಯಾಗಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ನನ್ನ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ‘ ಎಂದು ಕಿಡಿಕಾರಿದ್ದಾರೆ.

    MORE
    GALLERIES

  • 67

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಪ್ರಯೋಜನವಾಗುವಂತೆ ಈ ಯೋಜನೆಯನ್ನು ತಂದಿದ್ದು, ಸಾಮೂಹಿಕ ವಿವಾಹವಾದ ದಂಪತಿಗಳಿಗೆ ನಗದು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ.

    MORE
    GALLERIES

  • 77

    Pregnancy Test: ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೆಗ್ನೆನ್ಸಿ ಟೆಸ್ಟ್‌! ಯುವತಿಯರ ಆಕ್ರೋಶ

    ಇದೇ ಕಾರಣಕ್ಕಾಗಿ ನೂರಾರು ಕನ್ಯೆಯರು ವಿವಾಹ ನೋಂದಣಿ ಮಾಡಿಸಿದ್ದು, ಇದೀಗ ಈ ಕಾರ್ಯಕ್ರಮದ ಆಯೋಜಕರು ಗರ್ಭಧಾರಣೆ ಪರೀಕ್ಷೆ ಮಾಡಿಸಿರೋದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

    MORE
    GALLERIES