ಈ ವರ್ಷದ ಆರಂಭದಲ್ಲಿ ನಿಖಿಲ್ ಜೈನ್ ಅವರನ್ನು ವಿವಾಹವಾದ ನುಸ್ರತ್ ಜಹಾನ್ ಅವರು ಆಗಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ನುಸ್ರತ್ ಜಹಾನ್ ಅವರು ಕುಂಕುಮ, ಮಂಗಳಸೂತ್ರ ಧರಿಸಿ ನಿನ್ನೆ ಭಾನುವಾರದಂದು ತಮ್ಮ ಪತಿಯ ಜೊತೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೈಜೋಡಿಸಿ, ಕಣ್ಮುಚ್ಚಿಕೊಂಡ ಭಕ್ತಿ ಪರವಶಳಾಗಿದ್ದ ಆಕೆಯ ಬಾಯಿಂದ ಮಂತ್ರೋಚ್ಛೋರಗಳೂ ಬರುತ್ತಿದ್ದುದು ಅಚ್ಚರಿ ತಂದಿತ್ತು.
ಇನ್ನು, ನುಸ್ರತ್ ಜಹಾನ್ ಅವರು ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿರುವುದಕ್ಕೆ ಎಲ್ಲಾ ಮುಸ್ಲಿಮರು ವಿರೋಧಿಸಿಲ್ಲ. ಆಕೆ ಸಿಂಧೂರ, ಕುಂಕುಮ, ಮಂಗಲಸೂತ್ರ ಕಟ್ಟಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಇಸ್ಲಾಮ್ ಧರ್ಮಾನುಯಾಯಿಗಳು ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಸ್ವತಂತ್ರರಿದ್ದಾರೆ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ನ ಅಧ್ಯಕ್ಷ ವಾಸೀಮ್ ರಿಜ್ವಿ ಹೇಳಿದ್ದಾರೆ.