Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಇಂತಹ ವಿಶೇಷ ಅಗತ್ಯವಿರುವರರ ಸಮಸ್ಯೆಗಳನ್ನು ಗಮನಿಸಿರುವ ಟಿಟಿಡಿ, ದೇವರ ದರ್ಶನಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಒಂದು ವರ್ಷದ ಒಳಗಿನ ಮಕ್ಕಳಿಗೆ ಹೆತ್ತವರಿಗೆ ಉಚಿತವಾಗಿ ಮತ್ತು ವಿಶೇಷ ದರ್ಶನ ಭಾಗ್ಯವನ್ನು ನೀಡುತ್ತಿದೆ.

First published:

  • 18

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಕಲಿಯುಗ ದೇವರು ಅಂತಲೇ ಭಕ್ತರಿಂದ ಖ್ಯಾತಿ ಪಡೆದಿರುವ ತಿರುಮಲ ಶ್ರೀ ವೆಂಕಟೇಶ ಸ್ವಾಮಿ ದರ್ಶನಕ್ಕೆ ನಿತ್ಯ ಸಾವಿರಾರರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನಕ್ಕೆ ದೇಶದ ನಾನಾ ರಾಜ್ಯಗಳಿಂದಲೂ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಜನ ಸಾಮಾನ್ಯರಿಂದ ವಿವಿಧ ಕ್ಷೇತ್ರಗಳ ಗಣ್ಯರು ನಿತ್ಯ ತಿರುಮಲಕ್ಕೆ ಆಗಮಿಸುತ್ತಾರೆ. ದೇವರ ದರ್ಶನಕ್ಕೆ ಸರ್ವ ದರ್ಶನ, ದಿವ್ಯ ದರ್ಶನ, ಶ್ರೀವಾಣಿ ಟ್ರಸ್ಟ್‌ ದರ್ಶನ, ವಿಐಪಿ ಬ್ರೇಕ್ ದರ್ಶನ ಸೇರಿದಂತೆ 300 ರೂಪಾಯಿಗಳ ವಿಶೇಷ ಪ್ರವೇಶ ದರ್ಶನ, ಸುಪಥ ದರ್ಶನಗಳು ಮೂಲಕ ಭಕ್ತರು ದೇವರ ದರ್ಶನವನ್ನು ಪಡೆದುಕೊಳ್ಳಲು ಟಿಟಿಡಿ ವ್ಯವಸ್ಥೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ವೆಂಟೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ, ಅನ್ನದಾಸೋಹ ಸೇರಿದಂತೆ ಉಚಿತ ಲಡ್ಡುಗಳನ್ನು ಕೂಡ ಟಿಟಿಡಿ ನೀಡುತ್ತಿದೆ. ಇನ್ನು ದೇವರ ದಶಕ್ಕೆ ಆಗಮಿಸುವ ವೃದ್ಧರು, ದೈಹಿಕ, ಮಾನಸಿಕ ವೈಕಲ್ಯದಿಂದ ಬಳಲುತ್ತಿರುವವರು ಸೇರಿದಂತೆ ಒಂದು ವರ್ಷದ ಒಳಗಿನ ಮಕ್ಕಳನ್ನು ಕರೆತರುವ ಪೋಷಕರು ಗಂಟೆಗಟ್ಟಲೇ ಕಾಯಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಆದರೆ ಇಂತಹ ವಿಶೇಷ ಅಗತ್ಯವಿರುವರರ ಸಮಸ್ಯೆಗಳನ್ನು ಗಮನಿಸಿರುವ ಟಿಟಿಡಿ, ದೇವರ ದರ್ಶನಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಒಂದು ವರ್ಷದ ಒಳಗಿನ ಮಕ್ಕಳಿಗೆ ಹೆತ್ತವರಿಗೆ ಉಚಿತವಾಗಿ ಮತ್ತು ವಿಶೇಷ ದರ್ಶನ ಭಾಗ್ಯವನ್ನು ನೀಡುತ್ತಿದೆ. ಇದರಿಂದ ಕಂದಮ್ಮಗಳನ್ನು ಎತ್ತಿಕೊಂಡು ಪೋಷಕರು ದೇವರ ದರ್ಶನಕ್ಕೆ ಗಂಟೆಗಟ್ಟಲೇ ಕಾಯುವುದು ದೂರವಾಗಿದ್ದು, ನೇರವಾಗಿ ದರ್ಶನ ಪಡೆಯುವ ಅವಕಾಶ ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಇದೇ ವೇಳೆ ವಿಶೇಷ ಸೇವೆಯನ್ನು ಪಡೆದುಕೊಳ್ಳಲು ಕೆಲವು ನಿಯಮಗಳು, ನಿಬಂಧನೆಗಳು ಟಿಟಿಡಿ ವಿಧಿಸಿದೆ. ಒಂದು ವರ್ಷದ ಒಳಗಿನ ಮಕ್ಕಳನ್ನು ಕರೆದುಕೊಂಡು ಹೋಗುವ ಪೋಷಕರ ಉಚಿತ ದರ್ಶನಕ್ಕಾಗಿ ಮಗುವಿನ ಜನನ ಪ್ರಮಾಣ ಪತ್ರವನ್ನು ತೋರಿಸಬೇಕಾಗುತ್ತದೆ. ಒರಿಜಿನಲ್​ ದಾಖಲೆ ಇದ್ದರೆ ಮಾತ್ರ ಈ ವ್ಯವಸ್ಥೆ ಲಭ್ಯವಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಒಂದೊಮ್ಮೆ ಜನನ ಪ್ರಮಾಣಪತ್ರ ಇಲ್ಲದಿದ್ದರೆ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿರುವ ಪ್ರಮಾಣಪತ್ರವನ್ನು ನೀಡಬಹುದು. ಉಳಿದಂತೆ ಪೋಷಕರು ತಮ್ಮ ಗುರುತಿನ ಚೀಟಿ ಅಂದರೆ ಆಧಾರ್, ಓಟರ್ ಐಡಿ, ಪಾನ್ ಕಾರ್ಡ್​​ಗಳಲ್ಲಿ ಒಂದನ್ನು ತೆಗೆದುಕೊಂಡು ಹೋಗಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಈ ವಿಶೇಷ ದರ್ಶನಕ್ಕೆ ಒಂದು ವರ್ಷದ ಒಳಗಿನ ಮಗುವನ್ನು ಹೊಂದಿರುವ ಪೋಷಕರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಈ ದರ್ಶನಕ್ಕಾಗಿ ಭಕ್ತರು ಮೊದಲು ಬುಕ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಯಾವುದೇ ಹಣವನ್ನು ಪಾವತಿಸಬೇಕಾದ ಅಗತ್ಯವೂ ಇಲ್ಲ. ಬೆಳಗ್ಗೆ 10 ಗಂಟೆಗಳಿಂದ ಸಂಜೆ 6 ಗಂಟೆಗಳವರೆಗೂ ದೇವರ ದರ್ಶನ ಪಡೆದುಕೊಳ್ಳಲು ಅವಕಾಶವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Tirumala: 1 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ದರ್ಶನ ಬಹಳ ಸುಲಭ! ವಿಶೇಷ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ಸುಪಥಂ ಮಾರ್ಗದಲ್ಲಿ ಮಕ್ಕಳ ಜನನ ಪ್ರಮಾಣಪತ್ರ, ಪೋಷಕರು ಐಡಿ ಪ್ರೂಫ್ಸ್‌ಗಳನ್ನು ಟಿಟಿಡಿ ಸಿಬ್ಬಂದಿ ಪರಿಶೀಲಿಸಿದ ನಂತರ ನೇರವಾಗಿ ದರ್ಶನಕ್ಕೆ ಅನುಮತಿ ನೀಡಲಾಗುತ್ತದೆ. ಇನ್ನು ದೇವರ ದರ್ಶನಕ್ಕೆ ಹೋಗುವ ಪೋಷಕರು, ಮಕ್ಕಳು ಕೂಡ ಸಂಪ್ರದಾಯದ ಉಡುಗೆಯಲ್ಲಿ ಹೋಗಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES