Tirumala: ವೈಕುಂಠ ಏಕಾದಶಿ ಸಂಭ್ರಮ: ಇದೇ ಮೊದಲ ಬಾರಿ 10 ದಿನ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ
ಶುಕ್ರವಾರ ಡಿ. 25ರಂದು ವೈಕುಂಠ ಏಕಾದಶಿ ವೈಭವಕ್ಕಾಗಿ ತಿರುಮಲ ತಿರುಪತಿ ಸಜ್ಜಾಗಿದೆ. ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ವೈಕುಂಠ ದ್ವಾರದ ನಿರ್ಮಾಣ ಮಾಡಿರುವ ಟಿಟಿಡಿ, ಇದೇ ಮೊದಲ ಬಾರಿ 10 ದಿನಗಳ ಕಾಲ ಈ ದ್ವಾರದ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಡಿ. 25ರಿಂದ ಜ. 3ರವರೆಗೆ ಈ ದ್ವಾರದ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ.