Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

ತಿರುಪತಿ ದೇಗುಲದ ಅರ್ಚಕರು ಗರ್ಭಗುಡಿ ಸ್ವಚ್ಛಗೊಳಿಸುವ ವೇಳೆ ಸ್ವಾಮಿಗೆ ಸಂಪೂರ್ಣ ಹೊಸ ಬಟ್ಟೆ ಉಡಿಸುತ್ತಾರೆ. ಅರ್ಚಕರು ಗರ್ಭಗುಡಿಯನ್ನು ಶುಚಿಗೊಳಿಸಿದರೆ ಉಳಿದ ದೇವಸ್ಥಾನವನ್ನು ದೇವಸ್ಥಾನದ ಸಿಬ್ಬಂದಿ ಶುಚಿಗೊಳಿಸುತ್ತಾರೆ. 

  • Local18
  • |
  •   | Andhra Pradesh, India
First published:

  • 17

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ಯುಗಾದಿ ಹಬ್ಬದ ಪ್ರಯುಕ್ತ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಆಚರಣೆಗಳು ನಡೆಯುತ್ತಿವೆ ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಬ್ಬದ ಹಿಂದಿನ ದಿನವೇ ಬೆಳಗ್ಗೆ 6ರಿಂದ 11ರವರೆಗೆ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಟ್ಟರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ತಿರುಪತಿಯಲ್ಲಿ ದೇವಾಲಯವನ್ನು ಶುಚಿಗೊಳಿಸುವುದನ್ನು ತಿರುಮಂಜನಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಟಿಟಿಡಿ ಈ ಕೋಯಿಲ್ ಆಳ್ವಾರ್ ತಿರುಮಂಜನ ಎಂಬ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮವನ್ನು ವರ್ಷದಲ್ಲಿ ನಾಲ್ಕು ಬಾರಿ ನಡೆಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ಯುಗಾದಿ, ಅನಿವಾರಿ ಆಸ್ಥಾನ, ಬ್ರಹ್ಮೋತ್ಸವ ಮತ್ತು ವೈಕುಂಠ ಏಕಾದಶಿ ಹಬ್ಬಗಳ ಮುನ್ನ ಬರುವ ಮಂಗಳವಾರದಂದು ಅಧಿಕಾರಿಗಳು ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ಮೊದಲಿಗೆ ತಿರುಮಲ ಸ್ವಾಮಿಯ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿ ಆನಂದ ನಿಲಯದಿಂದ ಬಂಗಾರುವಕಿಳಿಯವರೆಗಿನ ದೇವಸ್ಥಾನದ ಒಳಗಿನ ಉಪ ದೇವಾಲಯಗಳು, ದೇವಾಲಯದ ಆವರಣ, ಗೋಡೆಗಳು, ಛಾವಣಿ, ಪೂಜಾ ಸಾಮಗ್ರಿಗಳು ಇತ್ಯಾದಿಗಳನ್ನು ನೀರಿನಿಂದ ಸ್ವಚ್ಛಗೊಳಿಸಲಾಯಿತು.ಹಲವಾರು ಸುಗಂಧ ದ್ರವ್ಯಗಳನ್ನನು ತಿರುಪತಿ ದೇವಾಲಯದಾದ್ಯಂತಪ್ರೋಕ್ಷಣೆ ಮಾಡಲಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ಬಳಿಕ ತಿಮ್ಮಪ್ಪನಿಗೆ ಹೊದಿಸಿದ್ದ ಬಟ್ಟೆ ತೆಗೆದು ವಿಶೇಷ ಪೂಜೆ, ನೈವೇದ್ಯ ನಡೆಸಿದ ಬಳಿಕ ಅರ್ಚಕರು 11 ಗಂಟೆಗೆ ಭಕ್ತರಿಗೆ ಸರ್ವದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ತಿರುಪತಿ ದೇಗುಲದ ಅರ್ಚಕರು ಗರ್ಭಗುಡಿ ಸ್ವಚ್ಛಗೊಳಿಸುವ ವೇಳೆ ಸ್ವಾಮಿಗೆ ಸಂಪೂರ್ಣ ಹೊಸ ಬಟ್ಟೆ ಉಡಿಸುತ್ತಾರೆ. ಅರ್ಚಕರು ಗರ್ಭಗುಡಿಯನ್ನು ಶುಚಿಗೊಳಿಸಿದರೆ ಉಳಿದ ದೇವಸ್ಥಾನವನ್ನು ದೇವಸ್ಥಾನದ ಸಿಬ್ಬಂದಿ ಶುಚಿಗೊಳಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tirumala: ತಿರುಪತಿ ತಿಮ್ಮಪ್ಪನಿಗೆ ಸ್ನಾನದ ಸಂಭ್ರಮ! ಲಕಲಕ ಹೊಳೆಯುತ್ತಿರುವ ದೇವರು

    ಯುಗಾದಿ ಹಬ್ಬದ ಪ್ರಯುಕ್ತ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ. ಯುಗಾದಿ ಹಬ್ಬದಂದು ದೇವಸ್ಥಾನದಲ್ಲಿ ಯುಗಾದಿ ಅಸ್ಧಾನ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES