ತಿರುಪತಿ ತಿರುಮಲ ಕ್ಷೇತ್ರ ಒಂದು ಅದ್ಭುತ ಧಾರ್ಮಿಕ ಕ್ಷೇತ್ರ. ದಿನವೂ ಅಲ್ಲಿ ನಿತ್ಯ ಕಲ್ಯಾಣ ನಡೆಯುವ ಕಾರಣ ಅನೇಕ ಭಕ್ತರು ರಾತ್ರಿ ಸಮಯದಲ್ಲಿ ತಿರುಮಲದಲ್ಲಿ ತಂಗಲು ಇಷ್ಟಪಡುತ್ತಾರೆ. ಪ್ರಕಾಶಮಾನ ದೀಪಗಳು ಅವರಿಗೆ ಹೊಸ ಆಧ್ಯಾತ್ಮಿಕತೆಯ ಹೊಸ ಭಾವನೆಯನ್ನು ನೀಡುತ್ತವೆ. ಪ್ರತಿ ತಿಂಗಳು ನಡೆಯುವಂತೆ ಈ ತಿಂಗಳು ಸಹ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಹುಣ್ಣಿಮೆ ಗರುಡಸೇವೆ ಅದ್ಧೂರಿಯಾಗಿ ನಡೆದಿದೆ. (ಕೃಪೆ; Twitter @meegadakoti)
ಇನ್ನು ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಬಳಿಕ ಭಕ್ತರಿಗೆ ನೀಡುವ ಲಡ್ಡು ವಿಚಾರದಲ್ಲಿ ದೇವಸ್ಥಾನ ಆಡಳಿತ ಸಮಿತಿ ಟಿಟಿಡಿ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಇದುವರೆಗೂ ಲಡ್ಡು ತಯಾರಿಯನ್ನು ದೇವಸ್ಥಾನದ ಸಿಬ್ಬಂದಿ ಮೂಲಕ ಕೈಯಲ್ಲಿಯೇ ತಯಾರಿಸಲಾಗಿತ್ತಿತ್ತು. ಸದ್ಯ ಈ ಪದ್ಧತಿಗೆ ಬದಲಾವಣೆ ತಂದಿರುವ ಸಮಿತಿ ಲಡ್ಡು ತಯಾರಿಸಲು ಯಂತ್ರಗಳನ್ನು ಬಳಕೆ ಮಾಡಲು ಆರಂಭ ಮಾಡಿದೆ. ಇದಕ್ಕಾಗಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ. (ಕೃಪೆ; Twitter @meegadakoti)