TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

ಚೆನ್ನೈ: ತಿರುಮಲ ತಿರುಪತಿ ದೇವಸ್ಥಾನ ಕೋಟ್ಯಂತರ ಭಕ್ತರ ಭಕ್ತಿಯ ಆರಾಧ್ಯ ಕ್ಷೇತ್ರ. ಇಂದಿಗೂ ಪ್ರತಿದಿನ ಈ ಕ್ಷೇತ್ರಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಹೀಗಾಗಿಯೇ ಈ ದೇಗುಲ ವಿಶ್ವದ ಅತ್ಯಂತ ಶ್ರೀಮಂತ ದೇಗುಲ ಅನ್ನೋ ಖ್ಯಾತಿಗೂ ಪಾತ್ರವಾಗಿದೆ. ಇದೀಗ ಮತ್ತೊಂದು ಟಿಟಿಡಿಯ ಮತ್ತೊಂದು ಹೊಸ ದೇಗುಲ ನಿರ್ಮಾಣವಾಗಿ ಭಕ್ತರ ದರುಶನಕ್ಕೆ ಸಿದ್ಧವಾಗಿದೆ.

First published:

  • 17

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಹೌದು.. ತಿರುಪತಿ ತಿರುಮಲ ದೇವಸ್ಥಾನದ ಎರಡನೇ ದೇವಸ್ಥಾನ ಈಗಾಗಲೇ ತಮಿಳುನಾಡಿನ ರಾಜಧಾನಿ ಚೆನ್ನೈನ ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ ನಿರ್ಮಾಣವಾಗಿದೆ. ಭಕ್ತರ ದರುಶನಕ್ಕೆ ಈ ದೇಗುಲ ತಯಾರಾಗಿದ್ದು, ಕೊನೇ ಹಂತದ ಕೆಲಸ ಕಾರ್ಯಗಳು ಮುಗಿಯುವ ಹಂತದಲ್ಲಿದೆ.

    MORE
    GALLERIES

  • 27

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಚೆನ್ನೈನ ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ ಸ್ಥಾಪಿಸಲಾದ ಟಿಟಿಡಿಯ ಎರಡನೇ ಹೊಸ ದೇವಾಲಯದ ಉದ್ಘಾಟನೆಗೆ ಪೂರ್ಣ ತಯಾರಿ ನಡೆದಿದ್ದು, ಇದೇ ಮಾರ್ಚ್‌ ತಿಂಗಳ 17ನೇ ತಾರೀಕಿನಂದು ದೇವಾಲಯ ಲೋಕಾರ್ಪಣೆಗೊಳ್ಳಲಿದೆ.

    MORE
    GALLERIES

  • 37

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಟಿಟಿಡಿಯ ಎರಡನೇ ಈ ಹೊಸ ದೇವಾಲಯವು ಭಗವಾನ್ ವೆಂಕಟೇಶ್ವರನ ದೈವಿಕ ಪತ್ನಿ ಪದ್ಮಾವತಿ ಅಮ್ಮನವರಿಗೆ ಸಮರ್ಪಿತವಾಗಿದೆ ಎಂದು ಆಡಳಿತ ಮಂಡಳಿ ಹೇಳಿದ್ದು, ಇದು ಮಾಹಿತಿ ಕೇಂದ್ರಕ್ಕೆ ಬಹಳ ಹತ್ತಿರದಲ್ಲಿದೆ.

    MORE
    GALLERIES

  • 47

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ತಿರುಪತಿ ತಿರುಮಲ ಆಡಳಿತ ಮಂಡಳಿಯ ಎರಡನೇ ದೇವಾಲಯ ನಿರ್ಮಾಣಕ್ಕೆ ದಕ್ಷಿಣ ಭಾರತದ ಚಲನಚಿತ್ರ ನಟಿ ಪಿ.ಕಾಂಚನಾ ಅವರು 14880 ಚದರ ಅಡಿ ವಿಸ್ತೀರ್ಣದ ಜಮೀನನ್ನು ದಾನ ಮಾಡಿದ್ದರು.

    MORE
    GALLERIES

  • 57

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಮಾರ್ಚ್‌ 17ರಂದು ಮಹಾಕುಂಭಾಭಿಷೇಕ ಸೇರಿದಂತೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

    MORE
    GALLERIES

  • 67

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಮಾರ್ಚ್​ 17 ರಂದು ನಡೆಯುವ ಶ್ರೀ ಪದ್ಮಾವತಿ ಅಮ್ಮನವರ ಮಹಾಕುಂಭಾಭಿಷೇಕದಲ್ಲಿ ಎಲ್ಲಾ ಭಕ್ತರು ಭಾಗವಹಿಸುವಂತೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

    MORE
    GALLERIES

  • 77

    TTD: ಚೆನ್ನೈನಲ್ಲಿ ತಿರುಪತಿ ತಿಮ್ಮಪ್ಪನ ಎರಡನೇ ದೇಗುಲ ನಿರ್ಮಾಣ; ಮಾರ್ಚ್‌ 17ಕ್ಕೆ ನಡೆಯಲಿದೆ ಲೋಕಾರ್ಪಣೆ

    ಇನ್ನು ಟಿಟಿಡಿಯ ಹೊಸ ದೇಗುಲದ ದರ್ಶನ ಪಡೆಯಲು ಭಕ್ತರು ತುದಿಗಾಲಲ್ಲಿ ನಿಂತಿದ್ದು, ಮಾರ್ಚ್‌ 17ಕ್ಕೆ ಲೋಕಾರ್ಪಣೆಗಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಎರಡು ದೇಗುಲ ನಿರ್ಮಾಣ ಆಗಿರುವುದರಿಂದ ಭಕ್ತರು ವಿಂಗಡಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    MORE
    GALLERIES