Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

Tirumala Temple: ಕೋವಿಡ್​ ಸೋಂಕು ಕಡಿಮೆಯಾಗಿರುವ ಹಿನ್ನಲೆ ಇಂದಿನಿಂದ ತಿರುಪತಿ ತಿಮ್ಮಪ್ಪದ ದರ್ಶನಕ್ಕೆ ಉಚಿತ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್​ ಹಿನ್ನಲೆ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ವಿಧಿಸಿದ್ದು, ವಿಶೇಷ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

First published:

  • 16

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಕೋವಿಡ್​ ಎರಡನೇ ಅಲೆ ಬಳಿಕ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ ನಿರ್ಬಂಧಗೊಳಿಸಲಾಗಿತ್ತು. ಅಲ್ಲದೇ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು

    MORE
    GALLERIES

  • 26

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಉಚಿತ ದರ್ಶನ ರದ್ದಾದ ಹಿನ್ನಲೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಜನಸಾಮಾನ್ಯರ ಸಂಖ್ಯೆ ಕೂಡ ಕುಸಿದಿತು. ಸಾವಿರ ಗಟ್ಟಲೇ ಟಿಕೆಟ್​ ಜೊತೆಗೆ ಇಂತಿಷ್ಟೇ ಟಿಕೆಟ್​ ಅನ್ನು ಮಾತ್ರ ಹಂಚಲಾಗಿತ್ತು

    MORE
    GALLERIES

  • 36

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಆದರೆ, ಈಗ ಎಲ್ಲಾ ಭಕ್ತರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರಿಗೆ ಮಾತ್ರ ಈ ಪ್ರವೇಶ ಉಚಿತವಾಗಿರಲಿದೆ. ತಿರುಮಲ ತಿರುಪತಿ ಇದೇ ಚಿತ್ತೂರು ಜಿಲ್ಲೆಯಲ್ಲಿದ್ದು, ಈ ಜಿಲ್ಲೆಯ ಜನರು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ

    MORE
    GALLERIES

  • 46

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಕೋವಿಡ್​ ನಿಯಮಾವಳಿಗಳೊಂದಿಗೆ ದಿನಕ್ಕೆ 2000 ಟೋಕನ್​ ವಿತರಿಸುವ ಮೂಲಕ ಉಚಿತ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಟಿಟಿಡಿ ತಿಳಿಸಿದೆ. ಈ ಮೂಲಕ ಶೀಘ್ರದಲ್ಲಿಯೇ ಎಲ್ಲಾ ಭಕ್ತರಿಗೂ ತಿಮ್ಮಪ್ಪನ ಉಚಿತ ದರ್ಶನ ಸಿಗಲಿದೆ

    MORE
    GALLERIES

  • 56

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಕಳೆದ ಒಂದೂವರೆ ವರ್ಷದಿಂದ ತಿರುಪತಿಯಲ್ಲಿ ದರ್ಶನ ವ್ಯವಸ್ಥೆಗೆ ಹಲವು ನಿರ್ಬಂಧಗಳಿರುವ ಹಿನ್ನಲೆ ಅನೇಕ ಜನಸಾಮಾನ್ಯರು ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗಿಲ್ಲ.

    MORE
    GALLERIES

  • 66

    Tirumala Free Darshan: ಇಂದಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ; ಭಕ್ತರಲ್ಲಿ ಸಂತಸ

    ಇನ್ನು ಇದೇ ವೇಳೆ ವಿಶೇಷ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಟಿಕೆಟ್​ಗೆ 300 ರೂ ವಿಧಿಸಲಾಗಿದೆ. ಈ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.

    MORE
    GALLERIES