40 ವೆಬ್ ಸೈಟ್ ಗಳ ವಿರುದ್ಧ ಟಿಟಿಡಿಯ ಐಟಿ ಇಲಾಖೆ ಪೊಲೀಸರಿಗೆ ದೂರು ನೀಡಿರುವುದು ಗೊತ್ತೇ ಇದೆ. ಇತ್ತೀಚೆಗೆ ಮತ್ತೊಂದು ನಕಲಿ ವೆಬ್‌ಸೈಟ್ ಕೂಡ ಬೆಳಕಿಗೆ ಬಂದಿದೆ. ನಕಲಿ ಯುಆರ್ ಎಲ್ ಸೃಷ್ಟಿಸಿ ವೆಬ್ ಸೈಟ್ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ ಟಿಟಿಡಿ ವಿಭಾಗ ತಿರುಪತಿ ಒನ್ ಟೌನ್ ಪೊಲೀಸರಿಗೆ ದೂರು ನೀಡಿದೆ. ಹಾಗಾಗಿ ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮತ್ತು TTDevasthanams ಆ್ಯಪ್ ಮೂಲಕ ದರ್ಶನ ಟಿಕೆಟ್, ರೂಮ್ಗಳನ್ನು ಬುಕ್ ಮಾಡಬೇಕೆಂದು ಟಿಟಿಡಿ ಮನವಿ ಮಾಡಿದೆ.