ಈ ಅವಘಡದಲ್ಲಿ 2ನೇ ಮಹಡಿಯಲ್ಲಿ ಸಾಕೇತಿ ಅಂಜಲಿ ಎಂಬ 14 ವರ್ಷದ ಬಾಲಕಿ, ಆಕೆಯ ಸಹೋದರ 17 ವರ್ಷದ ದುರ್ಗಾಪ್ರಸಾದ್ ಮತ್ತು ನೆಲಮಹಡಿಯಲ್ಲಿದ್ದ ಬಿಹಾರದ ಮತ್ತೊಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ ಅಂಜಲಿ ಜನ್ಮದಿನ ಆಚರಿಸಿಕೊಂಡ ಕೇವಲ ಒಂದು ಗಂಟೆಯೊಳಗೆ ಕಟ್ಟಡ ಕುಸಿದು ಸಾವನ್ನಪ್ಪಿದ್ದಾಳೆ. ಆಕೆಯ ಜೊತೆಗೆ ಸಹೋದರ ಕೂಡ ಸಾವನ್ನಪ್ಪಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.