1. ಇಸ್ರೋದಿಂದ 104 ಉಪಗ್ರಹಗಳಿದ್ದ PSLV-C37 ರಾಕೆಟ್ ಯಶಸ್ವೀ ಉಡಾವಣೆ. 2. ಡೊಕ್ಲಾಮ್ನ ಗಡಿ ವಿಚಾರದಲ್ಲಿ ಭಾರತ ಹಾಗೂ ಚೀನಾದ ಮಿಲಿಟರಿ ನಿಲುವು 3. GST(The Goods & Service Tax) ಸ್ವಾತಂತ್ರ್ಯ ಬಳಿಕದ 70 ವರ್ಷದಗಳಲ್ಲಿ ಜಾರಿಗೆ ಬಂದ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಜಾರಿ 4. ಭಾರತದ 14ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ರಾಮನಾಥ್ ಕೋವಿಂದ್. 5. ಸುಪ್ರೀಂ ಕೋರ್ಟ್ನಿಂದ ತ್ರಿವಳಿ ತಲಾಖ್ ನಿಷೇಧ, ಅಸಂವಿಧಾನಿಕವೆಂದು ಘೋಷಿಸುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟ. 6. 'ಖಾಸಗಿ ಹಕ್ಕು' ಜನರ ಮೂಲಭೂತ ಹಕ್ಕು ಎಂಬ ವಾದವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್. 7. ತವರು ನೆಲದಲ್ಲಿ ಮೊಟ್ಟ ಮೊದಲ ಬಾರಿ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಿದ ಭಾರತದ ಅಂಡರ್ 17 ತಂಡ. 8. ಏಕದಿನ ಪಂದ್ಯದಲ್ಲಿ ಮೂರನೇ ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ಕ್ರಿಕೆಟರ್ ರೋಹಿತ್ ಶರ್ಮಾ. ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಾಧನೆ. 9. 2017ರಲ್ಲಿ 7 ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಒಟ್ಟು 6 ರಾಜ್ಯಗಳಲ್ಲಿ(ಗುಜರಾತ್, ಗೋವಾ, ಉತ್ತರಾಖಂಡ್, ಗೋವಾ, ಮಣಿಪುರ ಹಾಗೂ ಉತ್ತರ ಪ್ರದೇಶ) ಜಯಗಳಿಸಿದ ಬಿಜೆಪಿ ಪಕ್ಷ.