ಅಡುಗೆ ಅನಿಲದ ಬೆಲೆ 1000ದ ಗಡಿ ದಾಟಿದೆ, ಈ ಕಾರಣದಿಂದ ಇಲ್ಲೊಂದು ಗ್ರಾಮ ಗೋಬರ್ ಗ್ಯಾಸ್ ಉತ್ಪಾದಿಸಿ ಸಾವಿರಾರು ರೂಪಾಯಿ ಉಳಿಸುತ್ತಿದೆ. ಗುಜರಾತ್ನ ಬನಸ್ಕಾಂತ ಜಿಲ್ಲೆಯ ದೇವದಾರ್ ತಾಲೂಕಿನ ನವ ಗ್ರಾಮದ ಜನರು ಕೇಂದ್ರ ಸರ್ಕಾರದ ಗೋಬರ್ ಧನ್ ಯೋಜನೆ ಬಳಸಿ ತನ್ನದೇ ಅಡುಗೆ ಅನಿಲ ತಯಾರಿಸುತ್ತಿದೆ. ಈ ಗ್ರಾಮದಲ್ಲಿ 1200 ಜನರು ಜನಸಂಖ್ಯೆ ಇದ್ದು, ಸುಮಾರು 200 ಕುಟುಂಬಗಳು ಈ ಜೈವಿಕ ಅನಿಲದ ಸ್ಥಾವರಗಳನ್ನು ಹೊಂದಿವೆ.