ದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿ ರಿಕ್ಷಾ ಚಾಲಕರಿಂದ ಹಿಡಿದು ಆಡಳಿತ ಅಧಿಕಾರಿಗಳವರೆಗೆ ಸಾಗುತ್ತಾರೆ. ಇತ್ತೀಚೆಗೆ ಯುಪಿಎಸ್‌ಸಿ ಫಲಿತಾಂಶ ಹೊರಬಿದ್ದಿದ್ದು 933 ಮಂದಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಬಿಹಾರದಿಂದ ಪ್ರತಿ ವರ್ಷ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗುತ್ತಾರೆ . ಬಿಹಾರದ ಸಹರ್ಸಾ ಜಿಲ್ಲೆಯ ಬಂಗಾನ್ ಕೂಡ ಅಂತಹ ಗ್ರಾಮವಾಗಿದ್ದು, ಇದನ್ನು ಐಎಎಸ್-ಐಪಿಎಸ್ ಗ್ರಾಮ ಎಂದು ಕರೆಯಲಾಗುತ್ತದೆ.
ಈ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ಮೂರು-ನಾಲ್ಕು ಜನರು ಆಡಳಿತ ಸೇವೆಗೆ (IAS)ಆಯ್ಕೆಯಾಗಿದ್ದಾರೆ. ಅಂತಹ ಹಲವು ಕುಟುಂಬಗಳು ಈ ಗ್ರಾಮದಲ್ಲಿವೆ. ಈ ಗ್ರಾಮವು ಸಹರ್ಸದಲ್ಲಿ ಮಾತ್ರವಲ್ಲದೆ ಇಡೀ ಕೋಸಿ ಪ್ರದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶ್ವಬ್ಯಾಂಕ್‌ನಲ್ಲಿ ವಾಟರ್ ಗ್ಲೋಬಲ್ ಪ್ರಾಕ್ಟೀಸ್‌ನ ನಿರ್ದೇಶಕರಾದ ಸರೋಜ್ ಕುಮಾರ್ ಕೂಡ ಬಂಗಾನ್ ಗ್ರಾಮದವರು ಎನ್ನುವುದು ಮತ್ತೊಂದು ವಿಶೇಷ.