Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

ನೀವು ಅನೇಕ ಚಹಾ ಪ್ರಿಯರನ್ನು ನೋಡುತ್ತೀರಿ. ಆದರೆ ಹಾಥಿ ದಾದಾ ಎಂದು ಕರೆಯಲ್ಪಡುವ ಈ ಆನೆಗೂ ಟೀ ಅಂದರೆ ಪಂಚಪ್ರಾಣ. ಪ್ರತಿದಿನ ಒಂದೆರಡು ಗುಟುಕು ಟೀ ಬೀಳಲಿಲ್ಲ ಎಂದರೆ ಆ ಆನೆಗೆ ಸಮಾದಾನವೇ ಇರಲ್ಲ.

First published:

  • 18

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ನೀವು ಅನೇಕ ಚಹಾ ಪ್ರಿಯರನ್ನು ನೋಡುತ್ತೀರಿ. ಆದರೆ ಹಾಥಿ ದಾದಾ ಎಂದು ಕರೆಯಲ್ಪಡುವ ಈ ಆನೆಗೆ ಟೀ ಅಂದರೆ ಪಂಚಪ್ರಾಣ. ಪ್ರತಿದಿನ ಒಂದೆರಡು ಗುಟುಕು ಟೀ ಬೀಳಲಿಲ್ಲ ಎಂದರೆ ಆ ಆನೆಗೆ ಸಮಾಧಾನವೇ ಇರಲ್ಲ.

    MORE
    GALLERIES

  • 28

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಚಹಾವನ್ನು ಇಷ್ಟಪಡುವ ಈ ಗಜರಾಜ ಮಧ್ಯಪ್ರದೇಶದ ರತ್ಲಾಮ್‌ನಲ್ಲಿದೆ. ಈ ಆನೆ ಬೆಳಗ್ಗೆಯೇ ಟೀ ಅಂಗಡಿಗೆ ಹೋಗಿ ಚಹಾ ಕುಡಿಯುವುದನ್ನು ರೂಢಿಸಿಕೊಂಡಿದೆ. ಈ ಗಜ ಮಾರುಕಟ್ಟೆಯಲ್ಲಿರುವ ಟೀ ಅಂಗಡಿಯವನನ್ನು ಬೆದರಿಸಿ ಟೀ ಕುಡಿಯುತ್ತದೆ.

    MORE
    GALLERIES

  • 38

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಆನೆಯೊಂದು ಚಹಾವನ್ನು ಹುಡುಕಿಕೊಂಡು ಹೋಗುವುದೆಂದರೆ ಅದು ವಿಚಿತ್ರ ಎನಿಸಬಹುದು. ಈ ಆನೆ ಟೀ ಚಟಕ್ಕೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯರು. ಇತರ ಗ್ರಾಹಕರಂತೆ ಈ ಆನೆ ಕೂಡ ಪ್ರತಿದಿನ ಟೀ ಅಂಗಡಿ ಮುಂದೆ ಕಾಣಿಸಿಕೊಂಡು ಅವರನ್ನು ರಂಜಿಸುತ್ತದೆ.

    MORE
    GALLERIES

  • 48

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಈ ಆನೆಯನ್ನು ರತ್ಲಮ್​ನ ದಲುಮೋಡಿಯಲ್ಲಿ ಪ್ರತಿದಿನ ಬೆಳಿಗ್ಗೆ ಕಾಣಬಹುದು. ಅದು ಪ್ರತಿ ದಿನ ಟೀ ಅಂಗಡಿಗೆ ಬರುತ್ತದೆ. ಆನೆ ನೋಡಿದ ತಕ್ಷಣ ಅಂಗಡಿ ಮಾಲೀಕನಿಗೆ ವಿಷಯ ಅರ್ಥವಾಗುತ್ತದೆ. ಅವನು ತಕ್ಷಣ ಚಹಾವನ್ನು ತಯಾರಿಸಿ, ಆರಿಸಿ ಆನೆ ಬಾಯಿಗೆ ಹಾಕುತ್ತಾನೆ.

    MORE
    GALLERIES

  • 58

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಈ ಆನೆಗೆ ಈ ಅಭ್ಯಾಸ ಆಗಲು ಟೀ ಸ್ಟಾಲ್ ಮಾಲೀಕನೇ ಕಾರಣ ಎನ್ನಲಾಗಿದೆ. ಒಮ್ಮೆ ಈ ಆನೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಈ ಟೀ ಅಂಗಡಿ ಮುಂದೆ ನಿಂತಿದೆ., ಅಂದು ಮಾಲೀಕ ಟೀ ನೀಡಿದ್ದಾನೆ. ಅದು ಕುಡಿದಿದ್ದೇ ತಡ, ಅಂದಿನಿಂದ ದಿನವೂ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿದೆ.

    MORE
    GALLERIES

  • 68

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಈ ಆನೆ ಸಮಯಪಾಲನೆ ಮಾಡುತ್ತದೆ. ಬೆಳಿಗ್ಗೆ 8 ಗಂಟೆಗೆ ಅಂಗಡಿ ಮುಂದೆ ಬರುತ್ತದೆ. ಇದಕ್ಕೆ ಸಣ್ಣ ಕಪ್ ಚಹಾ ಸಾಕಾಗುವುದಿಲ್ಲ. ಇದಕ್ಕಾಗಿ ಅವರು ದೊಡ್ಡ ಪಾತ್ರೆಯಲ್ಲಿ ಚಹಾ ಮಾಡಿ ಕೊಡುತ್ತಾರೆ.

    MORE
    GALLERIES

  • 78

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಅಂಗಡಿ ಮಾಲೀಕ ಕೂಡ ಈ ಆನೆಗೆ ಪ್ರೀತಿಯಿಂದ ಚಹಾ ಮಾಡಿ ದೊಡ್ಡ ಪಾತ್ರೆಯಲ್ಲಿ ನೀಡುತ್ತಾರೆ. ಈ ಹಾಥಿ ರಾಜನಿಗೆ ದಿನ ನೀಡುವ ಈ ಚಹಾ ಸಂಪೂರ್ಣವಾಗಿ ಉಚಿತವಾಗಿದೆ.

    MORE
    GALLERIES

  • 88

    Elephant: ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ, ಪ್ರತಿ ದಿನ ಮುಂಜಾನೆ ಅಂಗಡಿ ಮುಂದೆ ಹಾಜರಾಗ್ತಾನೆ ಗಜರಾಜ!

    ಈ ಚಹಾ ಪ್ರಿಯ ಆನೆಯನ್ನು ನೋಡಲು ಜನರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಚಹಾದ ಮೇಲಿನ ಈ ಮೂಕ ಪ್ರಾಣಿಯ ಪ್ರೀತಿಯನ್ನು ನೋಡಿ ಎಲ್ಲರೂ ಸಂತೋಷಪಡುತ್ತಾರೆ. ಗಜರಾಜ ಕೂಡ ಈ ಅಂಗಡಿಯವನ ಮೇಲೆ ವಿಶೇಷ ಪ್ರೀತಿ ಹೊಂದಿದೆ. ಹಾಗಾಗಿ ಈ ಟೀ ಸ್ಟಾಲ್‌ಗೆ ಮಾತ್ರ ಬರುತ್ತದೆ. ಬೇರೆ ಕಡೆ ಚಹಾ ಕುಡಿಯಲು ಹೋಗಲ್ಲ. ಒಮ್ಮೆ ಇದೇ ಟೀ ಸ್ಟಾಲ್ ನಲ್ಲಿ ಕೆಲಸ ಮಾಡುವವರು, ಬೇರೆ ಟೀ ಅಂಗಡಿಯವರು ಟೀ ನೀಡಲು ಮುಂದಾಗಿದ್ದಾರೆ , ಆದರೆ ಈ ಗಜರಾಜ ಕುಡಿಯಲಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES