ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

First published:

  • 111

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಹಾಲಿವುಡ್​  ಸಿನಿಮೀಯ ಶೈಲಿಯಲ್ಲಿ ಕಳ್ಳರ ಗುಂಪೊಂದು ವಿಶ್ವ ಪ್ರಸಿದ್ಧ ವಸ್ತುಸಂಗ್ರಹಾಲಯಕ್ಕೆ ಕನ್ನ ಹಾಕಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ.

    MORE
    GALLERIES

  • 211

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಡ್ರೆಸ್ಡೆನ್‌ನಲ್ಲಿರುವ ಗ್ರೀನ್ ವಾಲ್ಟ್ ಮ್ಯೂಸಿಯಂ ಅನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದರು. ಅದರಂತೆ ಬೆಳಿಗ್ಗೆ 5 ಗಂಟೆಗೆ ವಸ್ತು ಸಂಗ್ರಹಾಲಯದತ್ತ ದರೋಡೆ ಟೀಂ ಆಗಮಿಸಿತ್ತು. ಇದೇ ವೇಳೆ ಮತ್ತೊಂದು ತಂಡ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದರು.

    MORE
    GALLERIES

  • 311

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಈ ವೇಳೆ ಕಿಟಕಿ ಹೊಡೆದು ಕಳ್ಳರ ತಂಡ ಒಳ ನುಗ್ಗಿದೆ. ಅಲ್ಲಿದ್ದ ಆಭರಣಗಳು ಮತ್ತು ವಜ್ರಗಳನ್ನು ದೋಚಿದ್ದಾರೆ. ಒಂದು ಮೂಲದ ಮಾಹಿತಿ ಪ್ರಕಾರ ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 850 ಮಿಲಿಯನ್ ಯುರೋ. ಅಂದರೆ  6000 ಕೋಟಿ ರೂ.ಗಿಂತ ಹೆಚ್ಚು.

    MORE
    GALLERIES

  • 411

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಇನ್ನು ಕದ್ದ ಮಾಲ್​ನೊಂದಿಗೆ ಪರಾರಿಯಾಗಲು ಕಳ್ಳರು ಸಲೂನ್ ಸಂಸ್ಥೆಯ ಕಾರೊಂದನ್ನು ಬಳಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    MORE
    GALLERIES

  • 511

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ದರೋಡೆ ತಂಡ ಕರೆಂಟ್ ಸಪ್ಲೈ ನಿಲ್ಲಿಸಿದರೂ, ಕೆಲವು ಕಡೆಯ ಕಣ್ಗಾವಲು ಕ್ಯಾಮೆರಾಗಳಲ್ಲಿ ಕಳ್ಳರ ವಿಡಿಯೋ ಸೆರೆಯಾಗಿರಬಹುದು ಎಂದು ನಂಬಲಾಗಿದೆ. ಹೀಗಾಗಿ ನಗರದ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.

    MORE
    GALLERIES

  • 611

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಇನ್ನು ಜರ್ಮನಿಯ ವರದಿ ಪ್ರಕಾರ ಕಳ್ಳತನದಲ್ಲಿ ಪಾಲ್ಗೊಂಡಿದ್ದ ತಂಡದಲ್ಲಿದ್ದವರು ತುಂಬಾ ಚಿಕ್ಕವರು ಎನ್ನಲಾಗಿದೆ. ಇದಕ್ಕೆ ಕಾರಣ, ಸಣ್ಣ ಕಿಟಕಿಯ ಮೂಲಕ ಮ್ಯೂಸಿಯಂ ಒಳ ಪ್ರವೇಶಿಸಲು ಸಮರ್ಥರಾಗಿರುವುದು. ಇಂತಹ ಇಕ್ಕಟಿನ ಕಿಟಕಿ ಮೂಲಕ ಸಣ್ಣವರಿಗೆ ಮಾತ್ರ ಸುಲಭವಾಗಿ ಒಳ ಪ್ರವೇಶಿಸಬಹುದು ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

    MORE
    GALLERIES

  • 711

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಡ್ರೆಸ್ಡೆನ್ ವಸ್ತುಸಂಗ್ರಹಾಲಯವನ್ನು 18ನೇ ಶತಮಾನದ ಸ್ಯಾಕ್ಸೋನಿಯ ಚುನಾಯಿತನಾದ ಅಗಸ್ಟಸ್ ದಿ ಸ್ಟ್ರಾಂಗ್ ಸ್ಥಾಪಿಸಿದ್ದರು. ಐತಿಹಾಸಿಕ ನಾಣ್ಯಗಳು ಮತ್ತು ಆಭರಣಗಳು ಸೇರಿದಂತೆ ಸಾವಿರಾರು ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.

    MORE
    GALLERIES

  • 811

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಇಲ್ಲಿದ್ದ ಅತ್ಯಮೂಲ್ಯವಾದ ನಿಧಿಗಳಲ್ಲಿ ಡ್ರೆಸ್ಡೆನ್ ಗ್ರೀನ್ ಎಂದು ಕರೆಯಲ್ಪಡುವ  41 ಕ್ಯಾರೆಟ್ ನೈಸರ್ಗಿಕವಾಗಿ ಹಸಿರು ವಜ್ರ ಕೂಡ ಒಂದು. ಹಾಗೆಯೇ ರಷ್ಯಾದ ತ್ಸಾರ್ ಪೀಟರ್ I ಉಡುಗೊರೆಯಾಗಿ ನೀಡಿದ  25 ಇಂಚಿನ ಫಿಗರ್ ಆಫ್ ಮೂರ್ ಎಂಬ 648 ಕ್ಯಾರೆಟ್ ರತ್ನ ಇಲ್ಲಿರಿಸಲಾಗಿತ್ತು.

    MORE
    GALLERIES

  • 911

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    [caption id="attachment_291723" align="alignnone" width="924"] ಅಷ್ಟೇ ಅಲ್ಲದೆ ಭಾರತದ ಮೊಘಲ್ ರಾಜ ಔರಂಗಜೇಬರ ರತ್ನಗಳನ್ನು ಹೊಂದಿರುವ ಕೆಲ ಮಾಡೆಲ್​ಗಳು ಇಲ್ಲಿದ್ದವು. ಈ ಅತ್ಯಮೂಲ್ಯ ರತ್ನಗಳೆಲ್ಲವೂ ಕಳ್ಳರ ಪಾಲಾಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ ನಡೆದಿತ್ತು ಅತಿದೊಡ್ಡ ಮತ್ತೊಂದು ದರೋಡೆ?

    [/caption]

    MORE
    GALLERIES

  • 1011

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    ಸುಮಾರು 30 ವರ್ಷಗಳ ಹಿಂದೆ ಬೋಸ್ಟನ್‌ನ ಗಾರ್ಡ್ನರ್ ಮ್ಯೂಸಿಯಂನಲ್ಲಿ ನಡೆದ ಕಳ್ಳತನದಲ್ಲಿ 500 ಮಿಲಿಯನ್ ಯುರೋ ಮೊತ್ತದ ವಸ್ತುಗಳನ್ನು ಕಳ್ಳರು ದೋಚಿದ್ದರು.

    MORE
    GALLERIES

  • 1111

    ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈ ಚಳಕ: ದೋಚಿದ್ದು ಬರೋಬ್ಬರಿ 6 ಸಾವಿರ ಕೋಟಿ ರೂ. ವಸ್ತುಗಳು...!

    1990 ರಲ್ಲಿ ಬೋಸ್ಟನ್ ವಸ್ತುಸಂಗ್ರಹಾಲಯಕ್ಕೆ ಇಬ್ಬರು ಕಳ್ಳರು ಪೊಲೀಸ್ ಅಧಿಕಾರಿಗಳ ವೇಷದಲ್ಲಿ ಬಂದು 13 ಕಲಾಕೃತಿಗಳನ್ನು ಕದ್ದೊಯ್ದಿದ್ದರು. ಆ ಪ್ರಕರಣವು ಇಂದಿಗೂ ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದೀಗ ಜರ್ಮನಿಯ ಕಳ್ಳರು ಇದನ್ನು ಮೀರಿಸಿ ಕೈಚಳಕ ತೋರಿಸಿದ್ದಾರೆ. ಇದು ಇತಿಹಾಸದಲ್ಲೇ ಅತೀ ದೊಡ್ಡ ಕಳ್ಳತನ ಎಂದು ಬಣ್ಣಿಸಲಾಗಿದೆ.

    MORE
    GALLERIES