ಕೇಕ್ ಕತ್ತರಿಸಿ ಜನ್ಮದಿನಾಚರಣೆ ಮಾಡಿದರೆ ಆವರನ್ನೇಕೆ ಬಂಧಿಸಬೇಕು ಎಂಬುದು ಅಚ್ಚರಿಗೆ ಕಾರಣವಾಗಬಹುದು. ಆದರೆ ಆ ಕಳ್ಳರು ರಾತ್ರಿ ಸಮಯದಲ್ಲಿ ಬೇಕರಿ ಬೀಗ ಮುರಿದು ಒಳನುಗ್ಗಿ ಭರ್ತ್ ಡೇ ಆಚರಿಸಿಕೊಂಡಿದ್ದಾರೆ. ದರೋಡೆ ಮಾಡಲು ಬೇಕರಿಗೆ ನುಗ್ಗಿದ ಅವರಿಬ್ಬರು ಹೊಸದಾಗಿ ಬೇಯಿಸಿದ ಕೇಕ್‌ಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೆಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಅಗುತ್ತಿದೆ.
ಕಳೆದ ಮಂಗಳವಾರ ಜೋರ್ಹತ್ ನಗರದ ರಾಯಲ್ ರೋಡ್‌ನ ಗಿಟ್ಲು ಗೊಗೊಯ್ ಮತ್ತು ಸಂಜಯ್ ಪಟ್ನಾಯಕ್ ಎಂಬ ಇಬ್ಬರು ಕಳ್ಳರು ಜೋರ್ಹತ್ ನಗರದ ಬರೂವಾ ಚರಿಯಾಲಿ ಬಳಿಯಿರುವ ಮನೀಶಾ ಬೇಕರಿಯಲ್ಲಿ ದರೋಡೆ ಮಾಡಿದ್ದಲ್ಲದೆ ಬೇಕರಿಯನ್ನು ಧ್ವಂಸಗೊಳಿಸಿದ್ದಾರೆ. ಅವರ ಎಲ್ಲಾ ಕೃತ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರಿಬ್ಬರ ಆಟಗಳು ಸಾಮಾಜಿಕವಾಗಿ ವೈರಲ್ ಆಗಿದೆ.