1. ಮೌಸಿನ್ರಾಮ್(ಮೇಘಾಲಯ, ಭಾರತ): ಭಾರತದ ಮೇಘಾಲಯದಲ್ಲಿರುವ ಮೌಸಿನ್ರಾಮ್ ಎಂಬ ಹಳ್ಳಿಯು ವಿಶ್ವದಲ್ಲೇ ಅತ್ಯಧಿಕ ಮಳೆಯಾಗುವ ಪ್ರದೇಶವಾಗಿದೆ. ಇಲ್ಲಿ ವರ್ಷದಲ್ಲಿ 11,871 ಮಿಲಿ ಮೀಟರ್ನಷ್ಟು ಮಳೆಯಾಗುತ್ತದೆ. ಇದು ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿನ ಹಿಮಾಲಯ ಪರ್ವತಗಳು ಬಂಗಾಳ ಕೊಲ್ಲಿಯಿಂದ ಬರುವ ಮೋಡಗಳನ್ನು ತಡೆ ಹಿಡಿಯುತ್ತವೆ. ಹೀಗಾಗಿ ಇಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.
2. ಚಿರಪುಂಜಿ(ಮೇಘಾಲಯ, ಭಾರತ): ಮಾಸಿನರಾಮ್ನಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿ, ಮೇಘಾಲಯದಲ್ಲೇ ಇರುವ ಚಿರಪುಂಜಿಯು ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ವಾರ್ಷಿಕವಾಗಿ 11,777 ಮಿ. ಮಿಟರ್ ಮಳೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿನ ತಾಪಮಾನ 23 ಡಿಗ್ರಿಯಷ್ಟಿರುತ್ತದೆ ಹಾಗೂ ಮಳೆಗಾಲ ಆಂಮಭವಾಗುತ್ತಿದ್ದಂತೆಯೇ ಮಳೆಯ ಅಬ್ಬರದಿಂದ ಚಳಿ ಶುರುವಾಗುತ್ತದೆ.
3. ಟಟೆಂಡೋ(ಕೊಲಂಬಿಯಾ, ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಕೊಲಂಬಿಯಾದ ತಾಪಮಾನ ಸಾಮಾನ್ಯವಾಗಿ ಬಿಸಿಯಾಗಿರುತ್ತದೆ. ಆದರೆ ಇಲ್ಲಿನ ಕೆಲ ಪ್ರದೇಶಗಳು ಮಾತ್ರ ಅತ್ಯಧಿಕ ಮಳೆಗೆ ಪ್ರಸಿದ್ಧವಾಗಿವೆ. ಟಟೆಂಡೋ ಹೆಸರಿನ ಚಿಕ್ಕದಾದ ಪ್ರದೇಶದಲ್ಲಿ ಎರಡು ಮಳೆಗಾಲಗಳಿವೆ. ಇಲ್ಲಿನ ಜನಸಮಖ್ಯೆ 1000ಕ್ಕಿಂತಲೂ ಕಡಿಮೆ ಇದೆ. ವಾರ್ಷಿಕವಾಗಿ ಇಲ್ಲಿ 11,770 ಮಿ. ಮೀಟರ್ ಮಳೆಯಾಗುತ್ತದೆ.