Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

ಮೀರತ್‌: ಇತ್ತೀಚೆಗೆ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್‌ನ ಪುತ್ರ ಅಸಾದ್ ಅಹ್ಮದ್‌ನನ್ನು ಉತ್ತರ ಪೊಲೀಸರು ಎನ್‌ಕೌಂಟರ್‌ ಮಾಡಿದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಬ್ಬ ಖತರ್ನಾಕ್‌ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ್ದಾರೆ.

First published:

  • 17

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದು, ಗುರುವಾರ ಮಧ್ಯಾಹ್ನ ಕಿರಾತಕನನ್ನು ಗುಂಡಿಕ್ಕಿ ಕೊಂದಿದ್ದಾರೆ.

    MORE
    GALLERIES

  • 27

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    ಗೌತಮ ಬುದ್ಧ ನಗರ ಜಿಲ್ಲೆಯ ಬಾದಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುಜಾನಾ ಎಂಬ ಗ್ರಾಮದ ನಿವಾಸಿಯಾಗಿರುವ ಗ್ಯಾಂಗ್‌ಸ್ಟರ್‌ ಅನಿಲ ದುಜಾನಾನ ಮೂಲ ಹೆಸರು ಅನಿಲ್ ನಗರ್ ಎಂದು ತಿಳಿದು ಬಂದಿದೆ.

    MORE
    GALLERIES

  • 37

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಜನರಲ್ಲಿ ಭೀತಿ ಹುಟ್ಟಿಸಿ ಕ್ರಿಮಿನಲ್ ಗ್ಯಾಂಗ್‌ ಕಟ್ಟಿಕೊಂಡು ದಾಂಧಲೆ ನಡೆಸುತ್ತಿದ್ದ ಈತನ ವಿರುದ್ಧ 18 ಕೊಲೆಗಳು, ಸುಲಿಗೆ, ದರೋಡೆ, ಭೂಕಬಳಿಕೆ, ತೆರವು ಸೇರಿದಂತೆ 62 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

    MORE
    GALLERIES

  • 47

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    2012ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧನವಾದ ನಂತರ ಇನ್ನಿಬ್ಬರು ಕ್ರಿಮಿನಲ್‌ಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಾಸನಾ ಸಹಾಯದೊಂದಿಗೆ ಜೈಲಿನ ಒಳಗಿನಿಂದಲೇ ಅನಿಲ್ ದುಜಾನಾ ಸಂಚು ರೂಪಿಸುತ್ತಿದ್ದ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    2012ರಿಂದಲೂ ಜೈಲಿನಲ್ಲಿದ್ದ ಅನಿಲ್ ದುಜಾನಾಗೆ 2021ರಲ್ಲಿ ನ್ಯಾಯಾಲಯ ಜಾಮೀನು ನೀಡಿತ್ತು. ಆ ಬಳಿಕ ಹಳೇ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಆತನ ವಿರುದ್ಧ ನ್ಯಾಯಾಲ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

    MORE
    GALLERIES

  • 67

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    ದುಜಾನಾ ಕುಟುಂಬ ಮತ್ತು ಸುಂದರ್ ಭಾಟಿ ಗ್ಯಾಂಗ್ ನಡುವೆ ಹತ್ತಾರು ವರ್ಷಗಳಿಂದ ಸೇಡು ಇತ್ತು. ಸರ್ಕಾರಿ ಗುತ್ತಿಗೆಗಳನ್ನು ಪಡೆಯುವುದು, ಕಬ್ಬಿಣದ ಕಂಬಿ ಕಳ್ಳತನ, ಟೋಲ್ ಪ್ಲಾಜಾ ಗುತ್ತಿಗೆಗಳ ವಿಚಾರದಲ್ಲಿ ಎರಡು ತಂಡಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

    MORE
    GALLERIES

  • 77

    Encounter: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು!

    ಹೀಗಾಗಿ ಸುಂದರ್ ಭಾಟಿ ಗ್ಯಾಂ ಯಾವುದೇ ಕ್ಷಣದಲ್ಲೂ ದಾಳಿ ಮಾಡುವ ಸಾಧ್ಯತೆ ಇದ್ದುದರಿಂದ ಪೊಲೀಸರು ತಮ್ಮ ವಶದಲ್ಲಿದ್ದಾಗ ಅನಿಲ್ ದುಜಾನಾಗೆ ಬುಲೆಟ್ ಪ್ರೂಫ್ ಜಾಕೆಟ್ ತೊಡಿಸಿಯೇ ಕರೆದೊಯ್ಯುತ್ತಿದ್ದರು.

    MORE
    GALLERIES